ಲಾಭ ಮಾತ್ರ ಚುಂಬನಾಚಾರ್ಯನ ಪ್ರೇಯಸಿಗೆ!


ಭಾಜಪಾಕ್ಕೂ ಬಂದಿದೆಯಲ್ಲಪ್ಪಾ ಇಂತಹ ಕೇಡುಗಾಲ
ಬಿಚ್ಚತೊಡಗಿದ್ದಾನೆ ನೋಡಿ ಈ ಯಡ್ಡಿ ಮತ್ತೆ ತನ್ನ ಬಾಲ

ಜೈಲುವಾಸ ಅನುಭವಿಸಿ ಬಂದರೂ ಬಂದಂತಿಲ್ಲ ಬುದ್ಧಿ
ಕಾಶಿಗೆ ಹೋದರೂ ಆಗಿರುವಂತಿಲ್ಲ ಮಾನಸಿಕ ಶುದ್ಧಿ

ಪಾಪ ಸದಾನಂದ ಗೌಡರೀಗ ಹರಕೆಯ ಕುರಿಯಂತೆ
ಅತ್ತ ಸಂಸತ್ಸದಸ್ಯತನ ಹೋಯ್ತು, ಇತ್ತ ಬರೀ ಚಿಂತೆ

ಮಹಾ ಚುನಾವಣೆಯ ಒಳಗೆ ಆಗಲಿದೆ ಪಕ್ಷ ಸತ್ಯನಾಶ
ಭಾಜಪಾಕ್ಕೆ ಅವರಿಸಿದಂತಿದೆ ಯಾವುದೋ ಮೋಹಪಾಶ

ಭಾಜಪಾದ ಆಡಳಿತದಿಂದ ಲಾಭಮಾಡಿಕೊಂಡವಳೊಬ್ಬಳೇ
ರೇಣುಕಾನಿಂದ ಕೋಟಿ ಕೋಟಿ ಇಳಿಸಿ ಹಾರಿ ಹೋದವಳೇ

**************************************************