ರೈಲಲ್ಲಿ ಟೀ ಕಾಫೀ ಕೇಳಲು ನಾವೇ ಬೇಕು
ಮನೆಯಲ್ಲಿ ಎಂಜಲು ಎತ್ತಲು ನಾವೇ ಬೇಕು
ರಸ್ತೆಯಲ್ಲಿ ಕಸ ಗುಡಿಸೋಕೆ ನಾವೇ ಬೇಕು
ಆದರೂ ನಮ್ಮನ್ನಿಲ್ಲಿ ಯಾರು ಕೇಳೋರಿಲ್ಲ ಸ್ವಾಮಿ..
ಬೂಟ್ ಪಾಲಿಶ್ ಮಾಡೋರು ನಾವೇ
ಬಾಟಾ ಚಪ್ಪಲ್ ತೋಡಿಸೋರು ನಾವೇ
ಬೆಚ್ಚನೆಯ ಸ್ವೆಟರ್ ಹೊಲಿಯೋರು ನಾವೇ
ಆದರೂ ನಮ್ಮನ್ನಿಲ್ಲಿ ಯಾರು ಕೇಳೋರಿಲ್ಲ ಸ್ವಾಮಿ..
ಮತ ಕೇಳಲು ಹೋದಾಗ ಹಿಂದೆ ನಾವಿರಬೇಕು
ಮತ ಹಾಕುವ ವೇಳೆ ಮೊದಲು ನಾವಿರಬೇಕು
ಮತಗಟ್ಟೆಯ ಡಬ್ಬಿ ಹೊರಲು ನಾವಿರಬೇಕು
ಆದರೂ ನಮ್ಮನ್ನಿಲ್ಲಿ ಯಾರು ಕೇಳೋರಿಲ್ಲ ಸ್ವಾಮಿ..
ದೇಶ ಉಗ್ರರ ಕೈಲಿದ್ದಾಗ ಸಾವಿಗೆ ಎದೆ ಕೊಡಲು ನಾವು ಬೇಕು
ಸತ್ಯಾಗ್ರಹ ಮಾಡೋವಾಗ ಹಿಂದೆ ಬೊಬ್ಬೆ ಹಾಕಲು ನಾವು ಬೇಕು
ಸುಳ್ಳುಪೊಳ್ಳು ಭಾಷಣ ಕೇಳಿ ಅಹುದಹುದು ಎನ್ನಲು ನಾವು ಬೇಕು
ಆದರೂ ಭೂಮಿಯೋಳು ಈ ಬಡವನ ಕೂಗು ಯಾರು ಕೇಳೋರಿಲ್ಲ ಸ್ವಾಮಿ..
ಚುಕ್ಕಿ..
(ಪ್ರವೀಣ್.ಎಸ್.ಕುಲಕರ್ಣಿ )
ಪ್ರತಿಕ್ರಿಯೆ (5)