ಬಡತನದ ಮಣ್ಣಿನಲಿ ಕಣ್ಣೀರಮಳೆಗರೆದು

ಪುಟವಾಗಿ ನಾ ಬೆಳೆದೆ ಪ್ರೀತಿಕಣವ.

ಸಡಗರದ ಸುಗ್ಗಿಯಲಿ ನನ್ನವಳು ಬೆರೆತಾಗ 

ಹಾಡುವೆನು ಕುಣಿಯುವೆನು ತುಂಬಿ ಭಾವ.

 

ಬಡತನದ ಪಾತ್ರೆಯದು ಬಂಗಾರದದಿರಿನದು 

ಸಡಗರದಿ ಬೇಯುವುದು ಪ್ರೀತಿಯಡುಗೆ.

ಬಡಿಸಿಹಳು ನನ್ನವಳು ಬೆಂದಿರುವ ಹೃದಯವನು,

ಅಡುಗೆಯದು ಬಂಗಾರ, ಪ್ರೀತಿಕೊಡುಗೆ.