ಕಡಲ ತೀರದಲ್ಲಿ ಕವಿತೆ ಬರೆಯುವ , ಹುಚ್ಚು ನನಗೆ.

ಬರೆದ ಎಷ್ಟೊ ಕವಿತೆಗಳನ್ನು ಅಲೆಗಳು

ಬಂದು ಕೊಂಡೂಯ್ದದವು. ಅವೆಲ್ಲಾ ಕವಿತೆಗಳು

ಮುಳುಗಿದವೆ ?.....................ಇಲ್ಲ

ನೀ ತೀರದಲ್ಲಿ ಬಂದು ನಿಂತಾಗ, ಒಂದರ

ಹಿಂದೊಂದು ಬಂದು ಎದುರಾಗುತ್ತದೆ.

ನಾ ಹೇಳಾಬೇಕೆಂದು ಕೊಂಡ ಮಾತನ್ನೆಲ್ಲಾ ನಿನಗೆ ಮೌನದಲ್ಲಿ ಹೇಳುತ್ತವೆ.

ಏಕೆಂದರೆ ಅದು ಮಾತಿನಲ್ಲಿ ಬರೆದದ್ದಲ್ಲ .

ಮೌನದಲ್ಲಿ ಬರೆದದ್ದು.