ನಾನು ನಾನೆನೆ ಅದು ನಾನಲ್ಲ,

ನಾನು ತಾನನವೆನೆ ಅದು ನಾನು.

ತನ್ನಿರವ ಮರೆವ ತಾನನವೆ ನಾನು.

ತನುವಲ್ಲ ಮನವಲ್ಲ ನೋವುನಲಿವಲ್ಲ

ತನುಮನದಿರವ ಮರೆತರಿವು ನಾನು.

ಗುರುಪದದ ಸಂಚರವು, ಗುರುಪದದ ಇಂಚರವು

ಗುರುಪದದ ಅರಿವೆ ನಾನು.

ಅರಿವೆ ಗುರುಪದದಿಂಚರವ ಮರೆವೆ ಚರದಿರವ ನಾನು.