ಮಾತು...ಅದು ಪ್ರೀತಿಯ ಮನಸಿನ ಮಾತು,

ಹ್ರುದಯ ದಾಟಿ ಬಂದು ತುಟಿಗಳ ಅಂಚಲೆ ನಿಂತ ಮಾತು,

ಇನಿಯನ ಮೊಗವ ಕಂಡೊಡನೆ ಮೂಡಿದ ಸಡಗರದ ಮಾತು,

ಪ್ರತಿ ಬಾರಿ ಅವನ ಕಂಡೊಡೆ ಹೇಳಬೇಕೆಂದು ಎದೆಗೂಡಲಿ ಬಚ್ಚಿಟ್ಟ ಮಾತು,

ಕೊನೆಗೂ ಅದ ಹೇಳುವ ಸಮಯ ಬರದಾಯ್ತು.

 

ಪ್ರತಿದಿನ ಅವನ ಕಾಣುವ ಮುನ್ನ

ಇಡೀ ರಾತ್ರಿ ಮಾತುಗಳ ಸಿದ್ದತೆ,

ಹೇಳುವ ಕಾತರದಲ್ಲಿ ಕಂಡೊಡನೆ ಆತಂಕದಲಿ

ಎಲ್ಲ ಮರೆತು ಮಂಕಾಯ್ತೆ,

ತಯಾರಾಗಿ ಹೊರಬರದೆ ಈ ಪ್ರೀತಿ ಕಿವಿ ಮಾತು ಮತ್ತೆ ಮರೆಯಾಯ್ತೆ?..

 

ಅವನಿಚ್ಚಿಸಿದ ರಂಗಿನ ಉಡುಗೆ ತೊಟ್ಟು,

ಕೈಲೊಂದು ಕೆಂಗುಲಾಬಿ ಹೂ ಹಿಡಿದು,

ಹೆದರಿಕೆಯ ಹಿಂದಕ್ಕೆ ಸರಿಸಿ,

ಅವನ ನೋಡಹೊರಟೆ, ಕಂಡೊಡನೆ

ಆತಂಕವಿದೋ ಬಾಯಾರಿಸಿ, ಮಾತುಗಳ

ಮನದಾಟದಂತೆ ಮಾಡಿ ಮರೆಯಾಯ್ತು..

ಮತ್ತದೋ ಪ್ರೀತಿ ಮಾತಿಗೆ ಹೊರಬರುವ ದಾರಿ ಕಾಣದಾಯ್ತು..

 

ಅವನ ನಗು ಕಂಡು ನಕ್ಕಾಗ,

ಅವನು ಅದಕೆ ಸ್ಪಂದಿಸದೆ ನಟಿಸಿ ನಡೆದಾಗ

ಬಂದ ಮುನಿಸಿನ ಮಾತು,

ಅವನ ಕುರಿತ ಹೊಗಳಿಕೆ ಕೇಳಿ

ಮನಕಾದ ಅಬ್ಬರದ ಸಂತಸದ ಮಾತು,

 

ಅವನ ನಗುವಿಗೆ ಸೋತ

ಮನಸಿನ ಮಾತು,

ನಿದಿರೆಯ ಕಾಡಿದ

ಕನಸುಗಳ ಮಾತು,

ನನ ಕಣ್ಣೀರ ಒರೆಸಿದ

ಸಾಂತ್ವನದ ಮಾತು,

ಇವ ನನ್ನ ಸಂಗಾತಿಯಾಗಲೆಂಬ ಆಸೆಯ ಮಾತು...

 

ಒಟ್ಟಾರೆ ಮನದ ಪ್ರೀತಿಯ ಮಾತನ್ನು

ಇನಿಯನಿಗೆ ಮನ ಮುಟ್ಟುವಂತೆ ಹೇಳಿ

ಅವನೊಲವ ಗೆಲ್ಲಬೇಕೆಂಬುದೇ ನಿನಗೆ ನನ್ನ ಕಿವಿ ಮಾತು......