ಆಕಾಶದ ಹನಿಗಾಗಿ ಕಾತರದಿಂದ
ಕೈ ಬಾಯಿಗಳನ್ನಗಲಿಸಿ ಚಾಚಿರುವೆ ಕಾದಿರುವೆ
ಹೇಗೋ ಸಾಗಬೇಕಲ್ಲ ಬಾಳಬಂಡಿ!
ಮೋಡವಿಲ್ಲದ ನಭದಲ್ಲಿ-ಎಲ್ಲೋ ಒಂದೆಡೆ
ಉಳಿದಿರುವುದೇನೋ
ಜೀವಜಲದ ಸೆಲೆ-ನೆಲೆ?
ಬಿದ್ದೀತು-ಬಿದ್ದೀತು-
ಬಿಟ್ಟಿಲ್ಲ ಆಸೆ
ಸುತ್ತಲಿನ ನೆಲಕೆ ಹಸಿರು ಹೊದಿಕೆ
ಮೈಗೆ ಎಳೆಯ ತಳಿರಿನ ರವಿಕೆ
ಅಲಂಕಾರದ ಈ ಕನಸು, ಕನವರಿಕೆ
ನನಸಾಗುವ ಅಮೃತಗಳಿಗೆ
ಎಂದು ಬರುವುದೋ-
ಎಂದಾದರೂ ಬರದೇ ಇರಲಾರದು
ಆ ಮಧುರ ಕ್ಷಣವು
ನುಡಿಯುವೆನು ಕ್ಷೀಣ
ದನಿಯಲ್ಲಿ-
ಆದರೂ ಸ್ಪಷ್ಟವಾಗಿ!
ಪ್ರತಿಕ್ರಿಯೆ (1)