ಬ್ರಹ್ಮಾಂಡವನ್ನೇ ಕಲೆಯ ಬಲೆಯಲ್ಲಿ
ಸೆರೆಯಾಗಿಸುವ ಸೃಷ್ಟಿಯ ನಿರ್ಜೀವಗಳಿಗೂ
ಜೀವ ತುಂಬಿ ಸುಂದರತೆಯ ನೆಲೆತೋರುವ
ಅದ್ಭುತ ಕಲಾಕಾರನಿಗೆ ನನ್ನ ನಮನ ...
ಕವಿದ ಕತ್ತಲೆಯಲ್ಲೂ ಬೆಳಕು ಚೆಲ್ಲುವ
ಹೃದಯದಲಿ ಸಾವಿರ ನೋವಿದ್ದೂ
ತೋರದೆ ನಗೆಯರಳಿಸುವ ನಿನ್ನ ಸೃಷ್ಟಿಸಿದ
ಆ ದೇವನ ಮಹಾನ್ ಕಲಾಕಾರಿಕೆಗೆ ನನ್ನ ನಮನ ...
ಜಗದಿರವ ಮರೆವ ತನ್ಮಯತೆ, ಆಘಾದ
ತಾಳ್ಮೆ, ಅಧ್ಭುತ ನೈಪುಣ್ಯತೆ ಮೆರವ ,
ತನ್ನ ಚಿಂತನೆಗೆ ಸಾಕಾರ ರೂಪ ಕೊಟ್ಟು
ತಾನೆತ್ತ ಕೂಸ ಜತನಗೊಳಿಸುವ ಕಾರ್ಯತತ್ಪರತೆ
ಎಲ್ಲ ಮೇಳೈಸಿದ ಸೌಂಧರ್ಯೋಪಾಸಕನಿಗೆ ನನ್ನ ನಮನ...
ಬಣ್ಣಗಳ ಅರಿವೇ ಇಲ್ಲದ
ವಕ್ರತೆಯ ಪರಿಚಯವೇ ಇಲ್ಲದ ,
ಸೌಂಧರ್ಯವೇ ದೇವರೆಂದು ಪೂಜಿಸುವ
ನಮಗೆ ಭೂಮಿಯ ವಿರಾಟ ರೂಪದ
ಕಲ್ಪನೆ ತೋರಿದ ಕಲಾ ಚತುರನಿಗೊಂದು ನಮನ ...
ನಗೆಮೊಗದ ಹಿಂದಿನ ಲಾಸ್ಯ
ಮಡುಗಟ್ಟಿದ ಧುಖ್ಖ,ವಿಷಾದ ,ವ್ಯಂಗ್ಯ
ಕ್ರೌರ್ಯ ಎಲ್ಲಾ ಭಾವಗಳ ಅನಾವರಣ
ಗೊಳಿಸಿ ನೋಡುಗರ ದಿಗ್ಭ್ರಮೆಗೊಳಿಸಿ
ಕಲೆಯ ಮೆರೆಯುವ ಕಲಾ ರಸಿಕನಿಗೆ ನನ್ನ ನಮನ ...
ದಿನಕ್ಕೊಂದು ಬಣ್ಣ ವೇಷ ಧರಿಸಿ
ತಮ್ಮ ಅಸ್ತಿತ್ವ ಮಾರಿಕೊಂಡ
ಬಹುರೂಪಿಗಳನ್ನು ಹಿಡಿದು ತನ್ನ
ಕಲೆಯ ಚೌಕಟ್ಟಿನಲ್ಲಿರಿಸಿ ನಿರ್ದಿಷ್ಟ ರೂಪ
ಬಣ್ಣ ಕೊಟ್ಟು ,ಇದೇ ನಿನ್ನ ನಿಜದ ರೂಪ
ಎಂಬ ಸತ್ಯದ ಅರಿವು ನೀದುವ ನಿನ್ನ
ಎದೆಗಾರಿಕೆಗೆ, ಕಲೆಗಾರಿಕೆಗೆ ನನ್ನ ನಮನ ....
ಕಮಲಬೆಲಗೂರ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹಸಿರ ದಾರಿಯಲೀ..
ಮೋಹಕ ತಿರುವು..
ಮುಗಿಯದಿರಲೀ ಜಲದೊರತೆಯ ಆಯುಷ್ಯವು !..
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)