ಪ್ರೀತಿ!

ಪ್ರೀತಿ ಎಂದರೆ
ಬರೀ ಕನಸೆಂಬವರು
ಇಲ್ಲಿ ಕೆಲವರು

ಬರೀ ಕನಸಿನಲ್ಲಿಯೇ
ಪ್ರೀತಿಯ ಕಂಡವರು
ಇನ್ನು ಕೆಲವರು

ಕನಸಿನ ಪ್ರೀತಿಯನ್ನು
ನನಸಲ್ಲಿ ಕಂಡವರು
ಇಲ್ಲಿ ಕೆಲವರು

ನನಸಿನಪ್ರೀತಿಯನ್ನು
ಕನಸಾಗದಂತೆ
ಕಾಯ್ದುಕೊಂಡವರು
ಇನ್ನು ಕೆಲವರು!
***********