ವಾಸ್ತವ
ಅಮಾವಾಸ್ಯೆಯ ಕತ್ತಲಿನಲ್ಲಿ ಆಷಾಢ ಮಾ
ಎಲ್ಲಿದ್ಯ ಚೇತನ್ ಎಂದು ಅಮ್ಮ ಕೇಳಿ
ಒಂದೊಂದೇ ಮೆಟ್ಟಿಲನ್ನು ಇಳಿಯುತ್ತ ರಸ್ತೆಗೆ ಬಂದಾಗ ಮತ್ತೊಮ್ಮೆ ಫೋನ್ ರಿಂಗಣಿಸಿತು. ಯಾರೆಂದು ನೋಡಿದರೆ ಅವಳೇ ಫೋನ್ ಮಾಡಿದ್ದಳು. ಫೋನ್ ಎತ್ತಿ ಹಲೋ ಎಂದ ತಕ್ಷಣ ಏನು ಚೇತನ್ ನಾಳೆ ಆಫೀಸಿನಲ್ಲಿ ಅವನಿಗೆ ನನ್ನ ಪ್ರೇಮದ ವಿಷಯ ತಿಳಿಸುತ್ತೀಯ ಎಂದು ಕೇಳಿದಳು. ಮೃದುಲ ನೀನೇನೂ ಯೋಚನೆ ಮಾಡಬೇಡ ....ಎಲ್ಲ ಒಳ್ಳೆಯದೇ ಆಗುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಫೋನ್ ಇಟ್ಟು ಮನೆಗೆ ಬಂದೆ.
ಮನೆಗೆ ಬಂದ ತಕ್ಷಣ ಅಮ್ಮ ಏನೋ ಚೇತು ಇಷ್ಟೊತ್ತಿನಲ್ಲಿ ಅದೂ ಅಮಾವಾಸ್ಯೆ ದಿವಸ ಬೆಟ್ಟದ ಮೇಲೆ ಯಾಕೋ ಹೋಗಿದ್ದೆ? ಎಷ್ಟು ಗಾಭರಿ ಆಯ್ತು ಗೊತ್ತ ನನಗೆ.
ಏನಿಲ್ಲಮ್ಮ ಗಾಳಿ ಚೆನ್ನಾಗಿ ಬೀಸ್ತುತ್ತಿತ್ತು ಸುಮ್ಮನೆ ಮೇಲೆ ಹೋಗಿ ಸ್ವಲ್ಪ ಹೊತ್ತು ಕೂತು ಬಂದೆ. ಸರಿ ಸರಿ ಊಟ ಮಾಡಿ ಮಲಗು. ನಾಳೆ ಬೆಳಿಗ್ಗೆ ಬೇಗನೆ ಏಳಬೇಕು ಎಂದರು.
ಆಗಲೇ ನಾವು ಹಳ್ಳಿಗೆ ಬಂದು
ಮರುದಿನ ಅವಳಿಗಿಂತ ಮುಂಚೆಯೇ ಹೊರಟು ಬೆಂಗಳೂರಿಗೆ ಹೋಗೋಣ ಎಂದುಕೊಂಡಿದ್ದೆ. ಆದರೆ ಅವಳು ನಾನು ಸಿದ್ಧವಾಗುವ ವೇಳೆಗೆ ಮನೆಗೆ ಬಂದು ಕೂತಿದ್ದಳು. ಬೇರೆ ವಿಧಿ ಇಲ್ಲದೆ ಇಬ್ಬರೂ ಒಟ್ಟಿ
ಆ ಒಂದು ನೋಟ ಸಾಕು ಅವಳ ಮನಸಿನಲ್ಲಿ ಕುದಿಯುತ್ತಿರುವ ಸಾ
ಆಫೀಸಿಗೆ ಬಂದು ವಾರದಿಂದ ಬಂದಿದ್ದ ಮೇ
ಮಡಿಕೇರಿಯ ಫೋಟೋಗಳನ್ನು ನೋಡುತ್ತಾ ಕುಳಿತಿದ್ದೆ. ಪ್ರತಿಯೊಂದು ಫೋಟೋಗಳನ್ನು ನೋಡುತ್ತಿದ್ದಾಗ ಆ ನೆನಪುಗಳು ಮರುಕಳಿಸುತ್ತಿದ್ದವು. ಪ್ರತಿಯೊಂದು ಫೋಟೋದಲ್ಲೂ ಮೃದುಲ ಬಹಳ ಮುದ್ದಾಗಿ ಕಾಣುತ್ತಿದ್ದಳು. ಇಷ್ಟು ವರ್ಷದಿಂದ ಹೆಚ್ಚೂ ಕಡಿಮೆ ಪ್ರತಿ ದಿವಸ ಅವಳನ್ನೇ ಪ್ರತ್ಯಕ್ಷವಾಗಿ ನೋಡುತ್ತಿದ್ದರೂ ಯಾವತ್ತೂ ಅವಳು ಇಷ್ಟು ಮುದ್ದಾಗಿ ಕಂಡಿರಲಿಲ್ಲ. ಆದರೆ ಅದೇನು ವಿಚಿತ್ರವೋ ಏನೋ ಅವಳ ಮೇಲೆ ಪ್ರೀತಿ ಶುರುವಾದಾಗಿನಿಂದ ಅವಳು ಮುದ್ದಾಗಿ ಕಾಣುತ್ತಿದ್ದಳು.
ಅವಳ ಫೋಟೋವನ್ನು ಜೂಮ್ ಮಾಡಿ ನೋಡುತ್ತಿದ್ದಾಗ ಹಿಂದಿನಿಂದ ಯಾರೋ ಬಂದು ನಿಂತಂತಾಯಿತು. ತಿರುಗಿ ನೋಡಿದರೆ ಅವಳೇ ನಿಂತಿದ್ದಳು. ನನಗೆ ಒಂದು ರೀತಿ ಮುಜುಗರವಾಗಿ ತಕ್ಷಣ ಬೇರೆ ಫೈಲ್ ಒಂದನ್ನು ಓಪನ್ ಮಾಡಿ ಕೂತೆ. ಯಾಕೋ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗಲಿಲ್ಲ. ಎಲ್ಲಿ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನನ್ನ ಕಳ್ಳ ಮನಸ್ಸು ಅವಳಿಗೆ ಗೊತ್ತಾಗುತ್ತದೆ ಎಂದು ಸಿಸ್ಟಂ ಕಡೆ ನೋಡುತ್ತಾ ಹೇಳು ಮೃದುಲ ಎಂದೆ. ಚೇತೂ ಬಿಡುವಿದ್ದರೆ ಸ್ವಲ್ಪ ನನ್ನ ಜೊತೆ ಕ್ಯಾಂಟೀನ್ ಗೆ ಬರ್ತೀಯ. ಮೃದುಲ ಈಗಷ್ಟೇ ಕಾಫಿ ಆಯ್ತು ನಂದು. ಚೇತೂ ಕಾಫಿ ಕುಡಿಯಲು ಕರೆಯುತ್ತಿಲ್ಲ. ನಿನ್ನ ಬಳಿ ಮಾತಾಡಬೇಕು ಬಾ ಎಂದಳು. ಸರಿ ಎಂದು ಎದ್ದು ಅವಳ ಹಿಂದೆ ಕ್ಯಾಂಟೀನ್ ಗೆ ಹೋದೆ.
ಸ್ವಲ್ಪ ಹೊತ್ತು ಇಬ್ಬರ ನಡುವೆ ಮೌನ ನೆಲೆಸಿತ್ತು. ಆಗಷ್ಟೇ ಕಾಫಿ ಕುಡಿದಿದ್ದರೂ ಮತ್ತೆ ಒಂದು ಕಪ್ ಕಾಫಿ ಹಿಡಿದುಕೊಂಡು ಸುಮ್ಮನೆ ಆಗಸದ ಕಡೆ ನೋಡುತ್ತಾ ನಿಂತಿದ್ದೆ. ಇಬ್ಬರ ಕಪ್ ಗಳು ಖಾಲಿ ಆಗಿದ್ದರೂ ಮಾತಿನ್ನೂ ಶುರು ಆಗಿರಲಿಲ್ಲ. ನಾನೇ ಶುರು ಮಾಡಿದೆ. ಏನೋ ಮಾತಾಡಬೇಕಿತ್ತು ಎಂದು ಸುಮ್ಮನೆ ನಿಂತಿದ್ದೀಯಲ್ಲ ಮೃದುಲ. ಹೇಳು ಏನು ವಿಷಯ?
ಅದೇ ಚೇತೂ ನಾನು ನೆನ್ನೆ ಹೇಳಿದ್ದೆನಲ್ಲ ಅದರ ಬಗ್ಗೆ ಏನಾದರೂ ಚಿಂತೆ ಮಾಡಿದೆಯ? ಯಾವಾಗ ಹೇಳ್ತಾ ಇದ್ದೀಯ? ಚೇತೂ ಅವನು ಏನಾದರೂ ಒಪ್ಪದೇ ಇದ್ದರೆ ನಾನು ಬದುಕುವುದಿಲ್ಲ ಕಣೋ...
ಹೇ ಮೃದುಲ ಸುಮ್ಮನೆ ಹುಚ್ಚಿ ಹಾಗೆ ಆಡಬೇಡ. ಮೊದಲು ಅವನೊಡನೆ ಮಾತಾಡುತ್ತೀನಿ
ಅವನ ಹೆಸರು ಗೊತ್ತಿಲ್ಲ ಚೇತೂ.
ಏನು ಹೆಸರು ಗೊತ್ತಿಲ್ವಾ? ಇಲ್ಲ ಕಣೋ...
C ಬ್ಲಾಕ್ ನಲ್ಲಿ, ಆರನೇ ಅಂತಸ್ತಿ
ಚೇತೂ ತಗೋ ಇದೊಂದು ಲೆಟರ್ ಅವನ ಕೈಗೆ
ಏನೇ ಲವ್ ಲೆಟರ್ ಎಲ್ಲ ಬರಿಯಕ್ಕೆ ಶು
ಹೊಸ ಪ್ರಾಜೆಕ್ಟ್ ಒಂದರ ಕುರಿತು ಮೀ
ತಕ್ಷಣ ಎದ್ದು ಸರ್ ಅರ್ಜೆಂಟಾಗಿ ಆಚೆ ಹೋಗಬೇ
ಚೇತೂ...
ನನಗೆ ಪ್ರೇಮ ಪತ್ರ ಬರೆದು ಅಭ್ಯಾಸ ಇ
ಚೇತೂ ಚಿಕ್ಕಂದಿನಿಂದ ಮನೆಯಲ್ಲಿ ಅಪ್ಪ
ಆದರೆ ಬೆಳೆಯುತ್ತ ಬೆಳೆಯುತ್ತ ಅದು ನಿಜವಾದರೆ ಎಷ್ಟು ಚೆನ್ನಾಗಿರು
ಚೇತೂ ನಾವಿಬ್ಬರೂ ಒಟ್ಟಿಗೆ ಓದಿದೆವು
ನಾನು ಎಷ್ಟು ಬಾರಿ ನಿನ್ನನ್ನು ಮದುವೆ ಮಾಡಿಕೊ ಎಂದು ಕೇಳುತ್ತಿದ್ದೆ ಅಲ್ಲವ...ಅದು ತಮಾಷೆಗೆ ಕೇಳುತ್ತಿದ್ದದ್ದು ಅಲ್ಲ ಕಣೋ. ನಿಜವಾಗಿಯೂ ನಿನ್ನ ಮದುವೆ ಮಾಡಿಕೊಳ್ಳುವ ಉದ್ದೇಶದಿಂದಲೇ ಕೇಳುತ್ತಿದ್ದೆ. ಒಮ್ಮೆಯಾದರೂ ನೀನು ಒಪ್ಪಿಗೆ
ನೀಡುತ್ತೀಯೇನೋ ಎಂದು ಕಾಯುತ್ತಿದ್ದೆ. ಆದರೆ ನೀನು ತಮಾಷೆ ಎಂದು ಸುಮ್ಮನಾಗಿಬಿಡುತ್ತಿದ್ದೆ.
ಕಳೆದ ವಾರ ನಾವು ಮಡಿಕೇರಿಗೆ ಹೋಗಿದ್ದಾಗ ನಿನಗೆ ನೆನಪಿದೆಯ ನಾವು ಕ್ಯಾಂಪ್ ಫೈರ್ ಸುತ್ತ ಡಾನ್ಸ್ ಮಾಡುತ್ತಿದ್ದಾಗ ನಿನ್ನ ಕೈ ಹಿಡಿದು ಎಳೆಯಲು ಬಂದಾಗ ನೀನು ನನ್ನ ಕೈಯಿಂದ ಬಿಡಿಸಿಕೊಂಡೆ. ಅಂದು ರಾತ್ರಿ ನಾನು ಎಷ್ಟು ಅತ್ತಿದ್ದೇನೆ ಗೊತ್ತ. ಅಲ್ಲಿಂದ ಬಂದ ಮೇಲೆ ಯಾಕೋ ನನ್ನ ಕೈಲಿ ತಡೆಯಲು ಆಗುತ್ತಿಲ್ಲ ಚೇತೂ.. ಇನ್ನು ತಡ ಮಾಡಿದರೆ ಎಲ್ಲಿ ನಿನ್ನನ್ನು ಕಳೆದುಕೊಳ್ಳುತ್ತೇನೋ ಎಂದು ಭಯವಾಗುತ್ತಿತ್ತು. ಆದರೆ ಮಡಿಕೇರಿಯಿಂದ ಬಂದಾಗಿನಿಂದ ನಿನ್ನ ವರ್ತನೆಯೇ ಬದಲಾಗಿ ಬಿಟ್ಟಿತ್ತು.
ಮಡಿಕೇರಿಯಿಂದ ವಾಪಸ್ ನಾವು ಊರಿಗೆ ಹೋದಾಗ ಅಂದು ನಾನು ನಿಮ್ಮ ಮನೆಗೆ ಬಂದಿದ್ದಾಗ ನೀನು ನನ್ನ ಮೇಲೆ ರೇಗಿದಾಗ, ನಾನು ಕಣ್ಣಲ್ಲಿ ನೀರು ತುಂಬಿಕೊಂಡು ಮನೆಗೆ ವಾಪಸ್ ಹೋಗುತ್ತಿದ್ದಾಗ ಅತ್ತೆ ನನ್ನನ್ನು ತಡೆದು ಸಮಾಧಾನ ಮಾಡುತ್ತಿದ್ದಾಗ ಹೇಳಿದರು. ನೆನ್ನೆ ಸಂಜೆ ನನ್ನ ಮೇಲೂ ಕೂಗಾಡಿದ. "ನಿನ್ನನ್ನು ಸೊಸೆ ಎಂದಿದ್ದಕ್ಕೆ ಯಾಕೆ ಪದೇ ಪದೇ ಸೊಸೆ ಎನ್ನುತ್ತೀಯ ಅವಳೇನು ನನ್ನನ್ನು ಮದುವೆ ಆಗುತ್ತಾಳ ಎಂದು" ಹೇಳಿದರು. ಆಗ ಗೊತ್ತಾಯಿತು ಚೇತೂ ನೀನು ಸಹ ನನ್ನನ್ನು ಇಷ್ಟ ಪಡುತ್ತಿದ್ದೀಯ ಎಂದು. ಆದರೆ ಹೇಳಲು ಹಿಂಜರಿಯುತ್ತಿದ್ದೀಯ ಎಂದು.
ಅದಕ್ಕೆ ನಿನ್ನ ಬಳಿ ಬೇರೆ ಹುಡುಗನನ್ನು ಇಷ್ಟ ಪಡುತ್ತಿದ್ದೇನೆ ಎಂದು ಸುಳ್ಳು ಹೇಳಿದೆ. ಆಗ ನಿನ್ನಲ್ಲಿ ಉಂಟಾದ ಬದಲಾವಣೆ ನನಗೆ ಖಾತ್ರಿ ಆಯಿತು ನೀನು ನನ್ನನ್ನು ಪ್ರೀತಿಸುತ್ತಿದ್ದೀಯ ಎಂದು..
ಚೇತೂ ಐ ಲವ್ ಯೂ ಕಣೋ....
ಲೆಟರ್ ಓದಿ ಮುಗಿಸಿ ಹಿಂತಿರುಗಿ ನೋಡಿದರೆ ಅಲ್ಲಿ ಮೃದುಲ ನಿಂತಿದ್ದಾಳೆ. ಇಬ್ಬರ ಕಣ್ಣಂಚಲ್ಲೂ ಆನಂದದ ಕಂಬನಿ ತುಂಬಿತ್ತು.
ಪ್ರತಿಕ್ರಿಯೆ (6)