ಸಖೀ,
ಇಂದು ಇಲ್ಲಿ, ನಮ್ಮನ್ನು ಕಾಡುವವು ಅವರ ನೆನಪುಗಳು
ನಾಳೆ ಇನ್ನೆಲ್ಲೋ, ಇನ್ನಾರಿಗೋ ನಮ್ಮಯ ನೆನಪುಗಳು;
ಬದುಕಿದವರದೂ ಅಷ್ಟೇ, ಇಲ್ಲಿ ಬಾಳಿದವರದೂ ಅಷ್ಟೇ
ಆದರೂ, ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೇ?
ಏನೂ ಮಾಡದೇ ಅಳಿದವರೂ ನೆನಪಾಗುತ್ತಾರೆ
ಹೆಸರು ಮಾಡಿ ಮಡಿದವರೂ ನೆನಪಾಗುತ್ತಾರೆ;
ನೆನಪಾಗುವಾಗ ಒಳ್ಳೆಯವರು ಕೆಟ್ಟವರು ಎಂಬ
ಭೇದವೇ ಇಲ್ಲದಂತೆ ಎಲ್ಲರೂ ನೆನಪಾಗುತ್ತಾರೆ;
ನೆನಪುಗಳು ನಮ್ಮನ್ನು ಕಾಡಿಸುತ್ತವೆ, ಪೀಡಿಸುತ್ತವೆ,
ನಮ್ಮ ಮನಗಳಿಗೆ ಒಮ್ಮೊಮ್ಮೆ ಮುದ ನೀಡುತ್ತವೆ;
ಒಳ್ಳೆಯವರ ನೆನಪುಗಳಿಗಿಂತಲೂ ಒಮ್ಮೊಮ್ಮೆ
ಕೆಟ್ಟವರ ನೆನಪುಗಳು ಜಾಸ್ತಿ ನೋವು ತರುತ್ತವೆ;
ನಮ್ಮೊಂದಿಗೆ ಇಲ್ಲಿ ಇದ್ದು, ಮುಂದೆ ನಡೆದು ಹೋದ
ಎಲ್ಲರೂ ಮೆರವಣಿಗೆಯಲ್ಲಿ ಸಾಗುತ್ತಾ ಇರುತ್ತಾರೆ;
ನನ್ನನ್ನು ಕಂಡು ಅದ್ಯಾಕೋ ಅವರೆಲ್ಲಾ ಒಳಗೊಳಗೆ
ಮುಸಿ ಮುಸಿ ನಗುತ್ತಾ ಇರುವಂತೆ ಭಾಸವಾಗುತ್ತಾರೆ;
ಬದುಕಿದವರೂ ಅಷ್ಟೇ, ಇಲ್ಲಿ ಬಾಳಿದವರೂ ಅಷ್ಟೇ,
ಆದರೂ, ನಿಜ ಹೇಳು
ನಮ್ಮ ಹಾರಾಟ... ಹೋರಾಟ... ಇಲ್ಲಿ ಇನ್ನು ಅದೆಷ್ಟೇ?
****************************
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)
ಹೆಸರು ಮಾಡಿ ಮಡಿದವರೂ ನೆನಪಾಗುತ್ತಾರೆ;
ನೆನಪಾಗುವಾಗ ಒಳ್ಳೆಯವರು ಕೆಟ್ಟವರು ಎಂಬ
ಭೇದವೇ ಇಲ್ಲದಂತೆ ಎಲ್ಲರೂ ನೆನಪಾಗುತ್ತಾರೆ;
ಒಳ್ಳೆಯವರ ನೆನಪುಗಳಿಗಿಂತಲೂ ಒಮ್ಮೊಮ್ಮೆ
ಕೆಟ್ಟವರ ನೆನಪುಗಳು ಜಾಸ್ತಿ ನೋವು ತರುತ್ತವೆ; >>> ಆಸುರವರೆ ನಿಜ ನಿಮ್ಮ ಮಾತು ಎಲ್ಲವು ನಿಜ ಏನು ಮಾಡುವುದು, ಆದರು ಹೌದು ನಾನು ನಾನಗಿಯೆ ಇರಬೇಕು ಪಾರ್ಥಸಾರಥಿ