ಕೆರೆ ಬಾವಿಗಳು ಬತ್ತಿವೆ ಕನಸುಗಳು ಸತ್ತಿವೆ
ಕುಡಿಯಲೂ ನೀರಿಲ್ಲ , ಇದೆ ಕಣ್ಣ ತುಂಬಾ ನೀರು
ಸಾವು ಬದುಕಿನಾಟದಲಿ ತತ್ತರಿಸಿಹರು
ಕಾಣದೆ ಮಳೆ ಹೊರಟಿಹರು ಗುಳೆ
ಜೀವಧಾರೆಯನು ಸುರಿದುಬಿಡಿ
ಕಣ್ಣೀರನು ಒರೆಸಿಬಿಡಿ
ಮೋಡಗಳೇ ಅತ್ತ ಸಾಗಿರಿ ಬರಗಾಲದೂರಿಗೆ........
ಕಂಗೆಟ್ಟ ಬದುಕಿನಲಿ ಕಪ್ಪೆ,
ಕತ್ತೆಗಳ ಮದುವೆ ಮೆರವಣಿಗೆಗಳು
ಪೂಜೆ ಪುನಸ್ಕಾರಗಳು
ಓಲೈಸುತಿಹರು ಒಡನೆಯೇ
ವಸುಂಧರೆಯನು ತೊಯ್ದುಬಿಡಿ
ನಗುವನು ಚೆಲ್ಲಿಬಿಡಿ
ಮೋಡಗಳೇ ಅತ್ತ ಧಾವಿಸಿರಿ ಸೋದರರೂರಿಗೆ........
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹನಿಗಳು
ಸುಮ್ನೆ ಹೀಗೆ-೨೨
ಸುಮ್ನೆ ಹೀಗೆ-೨೧
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)