ತಪವನಾಚರಿಸಿದಳು ಪದಪ್ರಕೃತಿ
ಅರ್ಥಸಂಸರ್ಗಕೆ...
ಸುಸಂಸ್ಕೃತವಸ್ತ್ರಧಾರಿಣಿಯಾಗಿ... ತತ್ಪುರುಷನ ಸುಳಿವಿಲ್ಲ.
***
ವಿವಸ್ತ್ರಳಾದಳು,
ಪುರುಷತ್ವ ಕೆರಳಿಸಲು....ವ್ಯರ್ಥರಸವೂ ಸ್ರವಿಸಲಿಲ್ಲ.
***
ಅಸಮವಸ್ತ್ರ ಧರಿಸಿದಳು, ಮೈಸೊಬಗು ಕಾಣುವಂತೆ !
ಕಾಣದಂತೆ....!
ಅನಿಸಿತು ಅರ್ಥ ಬಂದಂತೆ...ಬರಲಿಲ್ಲ... ಸಾರ್ಥಕವಾಗಲಿಲ್ಲ.
****
ಅದೆಂಥ ಅರ್ಥಪುರುಷ...!
ಅದೆಂಥ ಪುರುಷಾರ್ಥ....!
ರಸಸ್ರವಿಸಿ ಮನ ತಣಿಸಬಾರದೇ !?
ಪದಪ್ರಕೃತಿ ಮೈದುಂಬುವಂತೆ.
ನವಮಾಸ ತುಂಬುವಂತೆ.
ಕವಿತಾರ್ಥ ಹೊರಹೊಮ್ಮುವಂತೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)