ಭಯ!ಭಯ!!
ಕೂತರೆ ಕುಸಿಯುವ ಭಯ
ನಿಂತರೆ ಬೀಳುವ ಭಯ
ನಡೆದರೆ ಎಡವುವ ಭಯ
ಓಡಿದರೂ ಬೆಂಬಿಡದ ಭಯ
ಮಲಗಿದರೆ ಸಾಯುವ ಭಯ
ಸತ್ತರೆ ಪುನರ್ಜನ್ಮದ ಭಯ
ಹಸಿವಾದರೆ ತಲೆ ತಿರುಗುವ ಭಯ
ತಿಂದರೆ ಅಜೀರ್ಣದ ಭಯ
ಕೆಮ್ಮಿದರೆ ಕ್ಯಾನ್ಸರಿನ ಭಯ
ಕ್ಯಾಕರಿಸಿದರೆ ಕ್ಷಯದ ಭಯ
ಸಂಭೋಗದಲಿ ಶೀಘ್ರ ಸ್ಖಲನದ ಭಯ
ಸ್ಖಲಿಸಿದರೆ ಗರ್ಭ ಕಟ್ಟುವ ಭಯ
ಕಟ್ಟಿದರೆ ಗರ್ಭ ಮೈ ಇಳಿಯುವ ಭಯ
ಭಯದ ಬೀಜ ಬಿತ್ತಿದ ಬಸಿರಿನಲಿ
ಮತ್ತೆ ಭಯವೇ ಹುಟ್ಟುವ ಭಯ!
ಭಯ!
ಭಯ!
ಭಯ!
ಭಯಕೆ ಬಯದ ಭಯ
ಎಲ್ಲವೂ
ಭಯದ ಮಾಯ!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)