ಬಂಧ ಕಳೆಯದಂತೆ
ಆಪ್ತನಾಗುವಂತೆ ನೀ
ಆತ್ಮೀಯವಾಗಿ ಮಾತನಾಡು
ನೋವು ಕೊಡದಂತೆ
ನಲಿವು ತುಂಬುವಂತೆ ನೀ
ಮಧುರವಾಗಿ ಮಾತನಾಡು
ಮನ ಕೆರಳಿಸದಂತೆ
ಹೃದಯ ಅರಳಿಸುವಂತೆ ನೀ
ಸತ್ವಭರಿತವಾಗಿ ಮಾತನಾಡು
ನೀರಸವೆನಿಸದಂತೆ
ಕಳೆಕಟ್ಟುವಂತೆ ನೀ
ಸ್ವಾರಸ್ಯವಾಗಿ ಮಾತನಾಡು
ತೋಚಿದ್ದನ್ನೆಲ್ಲ ಆಡುವ
ಮುನ್ನ ಯೋಚಿಸಿ ನೀ
ತೂಕದ ಮಾತನಾಡು
ಅಂತರಾಳದ ಒಳದನಿ
ಯನು ಆಲಿಸಿ ನೀ
ಎಚ್ಚೆತ್ತು ಮಾತನಾಡು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹನಿಗಳು
ಸುಮ್ನೆ ಹೀಗೆ-೨೨
ಸುಮ್ನೆ ಹೀಗೆ-೨೧
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)