" ಏನು ನಿನ್ನಷ್ಟಕ್ಕೆ ಗೊಣಗುತ್ತಾ ಬರುತ್ತಿದ್ದಿ ? "
"ಅಲ್ಲ ಅಮ್ಮಾವ್ರೆ, ಹೆಣ್ಮರಿ ಯಾರಿಗೂ ಬೇಡವಾಗಿದೆ . "
" ಏನು ಹೇಳ್ತಿದ್ದಿ? "
" ಸಾವಿತ್ರಮ್ಮನ ಮನೆಯಲ್ಲಿ ನಾಲ್ಕು ನಾಯಿಮರಿಗಳಿದ್ದವಲ್ಲ, ಅವುಗಳಲ್ಲಿ ಎರಡು ಗಂಡು ಮರಿಗಳನ್ನು ಯಾರೋ ಬಂದು ನಾವು ಸಾಕ್ತೇವೆ ಎಂದು ಕೊಂಡೊಯ್ಯಿದ್ದಾರೆ.ಹೆಣ್ಮರಿಗಳನ್ನು ಎಲ್ಲಾದ್ರೂ ದೂರ ಬಿಟ್ಟುಬಾ ಅಂದ್ರು."
" ಛೇ ಬೇಸರವಾಗುತ್ತದೆ ನೋಡು , ಹೌದು... ಸೀತಮ್ಮನ ಮನೆಯ ದನ ಕರು ಹಾಕಿದೆಯಾ?
" ಕರು ಹಾಕಿಯೂ ಆಯ್ತು, ಅದನ್ನು ಮಾರಿಯೂ ಆಯ್ತು, ಗಂಡು ಕರುವಾದ್ರೆ ಯಾರು ಸಾಕ್ತಾರೆ? ಮುದಿ ,ಗೊಡ್ಡು ದನಗಳದ್ದೆಲ್ಲ ಇದೇ ಕತೆ. "
"ಮನುಷ್ಯ ಬುದ್ಧಿಯೇ ಹೀಗೆ , ನೀನು ಮೊದ್ಲು ಹಿತ್ತಲಲ್ಲಿ ಇರುವ ಕಳೆಯನೆಲ್ಲ ತೆಗೆದುಬಿಡು, ಅಲ್ಲೊಂದು ಪಪ್ಪಾಯಿ ಗಿಡವಿದೆ , ಹೂ ಬಿಟ್ಟಿದೆಯಾ ನೋಡು"
" ಹೂ ಬಿಟ್ಟಿದೆ, ಆದ್ರೆ ಗಂಡು ."
" ಬುಡವನ್ನೇ ಕತ್ತರಿಸಿಹಾಕು ."
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹನಿಗಳು
ಸುಮ್ನೆ ಹೀಗೆ-೨೨
ಸುಮ್ನೆ ಹೀಗೆ-೨೧
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)