ಅಂದು
ರಾಜರು ಜನರ ಕಷ್ಟಗಳನು
ಮನಗಾಣಲು ಮಾರುವೇಷದಲಿ
ಮಾಡುತ್ತಿದ್ದರು  ದೇಶಸಂಚಾರ
ಸಿಗುತ್ತಿತ್ತು  ಸಮಸ್ಯೆಗಳಿಗೆ ಪರಿಹಾರ

ಇಂದು
ಮಂತ್ರಿಗಳು ಜನರ ಕಷ್ಟಗಳನು
ಮನಗಾಣುವ ಸೋಗಿನಲಿ ಮತಕ್ಕಾಗಿ
ಮಾಡುತ್ತಿದ್ದಾರೆ  ದೇಶಸಂಚಾರ
ಸಿಗುತ್ತಿವೆ ಆಶ್ವಾಸನೆಗಳು ಭರಪೂರ