ಈ ಸುಂದರ ಇರುಳಿನಲಿ
ನಿನ್ನನು ಹೇಗೆ ಮರೆತಿರಲಿ
ತುಂಬು ಚಂದಿರ ಅಂಬರದಲ್ಲಿ
ತುಂಬಿದೆ ತಿಳಿ ನೀರ್ ಕೊಳದಲ್ಲಿ
ಹಸಿರಾಡಿದೆ ಈ ತರು ಲತೆಗಳಲಿ
ಹೊಸದೆಮ್ಬಂತಿದೆ ಎಲ್ಲವು ಇಲ್ಲಿ
ಎದೆಯಲಿ ಹೊಮ್ಮುವ ಆಸೆಗಳೆಲ್ಲ
ಎದೆಯಲಿ ನಿಂದು ಅಣಕಿಸಿತಲ್ಲ
ಬಂದೆ ಬರುವೆ ನೀ ಎಂಬುವ ನಂಬುಗೆ
ಇಂದಿಗು ನನ್ನಲಿ ಉಳಿದಿಹುದಲ್ಲ
ಈ ಸುಂದರ ಇರುಳಿನಲಿ
ನಿನ್ನನು ಹೇಗೆ ಮರೆತಿರಲಿ
-ಮಾಲು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!