ಬಾನಂಗಳದೆ ಬೆಳದಿಂಗಳಿದೆ
ತಿಳಿ ನೀರಿದೆ ಹೊಳೆಯಲ್ಲಿ...
ಸುಳಿದಾಡುತಲಿ ಕೊಳಲೂದುತಲಿ
ಕಣ್ ಸೆಳೆಯುವ ಹರಿಯೆಲ್ಲಿ
ಮಹಾನೀಯನು ಇವನೆಲ್ಲಿ
ಇವ ಇರುವನೆ ಮರೆಯಲ್ಲಿ?!
ನೇಹದಲಿ ಅತಿ ಮೋಹದಲಿ
ರತಿ ರೂಪಿಯ ಜೊತೆಯಲ್ಲಿ
ಹಾಡುತಲಿ ಜಲಕ್ರೀಡೆಯಲಿ
ಮರೆತಿಹನೆ ನನ್ನ ಅಲ್ಲಿ?!
ಅನುಭೋಗದಲಿ ಅನುರಾಗದಲಿ
ಮನವೆಲ್ಲವು ಅವನಲ್ಲಿ
ಸಖನಿಲ್ಲದಲೆ ಸುಖವಿಲ್ಲದೆಲೆ
ಬಾಳುವುದು ಒಂದು ಬಾಳೆ ?!
ಕಾಯುತಲೇ ಒಳ ನೊಯುತಲೇ
ಕಾದಿಹಳು ಇಲ್ಲಿ ಬಾಲೆ,
ಬಾನಂಗಳದೆ ಬೆಳದಿಂಗಳಿದೆ
ಬಾರದಿಹನೆ ಇಂದೆ ಇಲ್ಲೇ
ತೋರದಿಹನೆ ಅವನ ಲೀಲೆ..!
-ಮಾಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!