ಹೊಸತನವ ಹೊತ್ತಿರುವ ಸಂಪದದ ಸಾಲು
ನಾಡು ನುಡಿ ಜೇನಿನಲಿ ಬೆರೆತಂತೆ ಹಾಲು
ಬಣ್ಣಗಳು ಅಲ್ಲಲ್ಲಿ ಅರಳಿದರೆ ಚಂದ
ಕಾವ್ಯ ಕುಸುಮಕೆ ಇಡುವ ನವಿರು ಶ್ರೀಗಂಧ
ಬರಲಿರುವ ನವಿನತೆಯ ಹೊಸತನಕೆ ಹೊಸೆದು
ತಾಯ್ ನುಡಿಗೆ ಮುಡಿಸಲಿಕೆ ಶಬ್ಧಗಳ ಬೆಸೆದು
ನುಡಿ ತೇರು ಕಟ್ಟುತಿಹ ಸಂಪದಿಗ, ಮಿತ್ರ
ನುಡಿನಮನ ಸಲಿಸುವರ ಜೊತೆಯಿರಲಿ ಚಿತ್ರ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!