ಮೂಡಣದಿ ಪಲ್ಲವಿಸಿದೆ ಚೆಲುವು
ನೇಸರನ  ಹಾಡಿನ ಪಲ್ಲವಿಯು
ನಭದಲಿ ಹೊಂಗಿರಣಗಳ ಆಗಮನ
ಇಳೆಯಲದೇನು ಹೊಸಸಂಚಲನ !

ಬಣ್ಣ ಬಣ್ಣದ ಹೂಗಳು ಮುಗುಳ್ನಗಲು
ಚಿಟ್ಟೆ ದುಂಬಿಗಳಿಗೆಲ್ಲ ರಸದೌತಣವು
ಸುಮಲತೆಗಳಲಿ ಮುತ್ತಿನ ಹಿಮಮಣಿಗಳು
ಮರೆಯಾಗಿ  ತೊಟ್ಟಿಕ್ಕುವ  ಕಣ್ಮಣಿಗಳು !

ಹಕ್ಕಿಬಳಗದ  ಚಿಲಿಪಿಲಿ  ಸ್ವರಮೇಳಗಳು
ತಂಗಾಳಿಗೆ ನಲಿಯುವ  ಹಸಿರಸಿರಿಗಳು
ಪಲ್ಲಕ್ಕಿ  ತೇಲುತಿದೆ  ಬೆಳ್ಳಕ್ಕಿಸಾಲುಗಳು
ತೆರೆದಿದೆ ಮನಮೋಹಕ ನವಕಾವ್ಯವು !