ಪ್ರಿಯಾ,
ಹಸಿರಾಡುವ ಮರ,
ನೆರಿಗೆಯ ನೀರ ಅಲೆ,
ಕೆಂಪಾದ ಸೂರ್ಯ,
ಮೆಲ್ಲನೆ ಹಾರುವ
ಬೆಳ್ಳಕ್ಕಿಯ ಸಾಲು
ಬಗೆ ಬಾನಿನ ಬಣ್ಣ;
ಬಳಿ ಇರಲು ನೀನು
ಏಕೆ ಸೆಳೆಯುವುದಿಲ್ಲ
ಇವೆಲ್ಲಾ ನನ್ನ ಕಣ್ಣ?!
-ಮಾಲು