ಮುರಳಿ ನಾದ ಮೋದನ
ಯಾವ ರಾಗದಲ್ಲಿ ನುಡಿಸಿ
ಮೋಹ ಗಯ್ಯಲಿ ಮೋಹನ
ಜಗವೆಲ್ಲವು ಸೊಗವಾಯಿತು
ಅರುಣ ಕಿರಣ ಸ್ಪರ್ಶಕೆ
ಮನ ನನ್ನದು ಶ್ರೀ ಹರಿಯೆ
ವಶವಾಯಿತು ಹರ್ಷಕೆ
ಅನುರಾಗದ ಸುರಭೋಗವು
ಸಂಜೀವನ ಸುರಿಸಿದೆ
ನವ ರಾಗದ ನವ ಜೀವನ
ನವ ಗಾನವ ನುಡಿಸಿದೆ
ಪೊರೆವ ನಿನ್ನ ಅಭಯ ಹಸ್ತ
ಇರಲಿ ಜೀವ ರಾಶಿಗೆ
ನಿನ್ನ ಸಂಗ ಅಂತರಂಗ
ಇರಲಿ ನಿನ್ನೀ ರಾಧೆಗೆ!
-ಮಾಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!