ಕಡಲ ತಡಿಗೆ ಹೊಡೆದು ಹೊಡೆದು
ಮೊರೆಯುತಿರುವ ಅಲೆಗಳು
ಸುಡುವ ಮುಖದ ಸೂರ್ಯ ಅಲ್ಲೆ
ಕಳೆದಿಹ ಹಲ ಯುಗಗಳು
ಬಿಡದೆ ಬೆಸ್ತ ಬೀಸಿ ಎಸೆದ
ಮೀನ ಹಿಡಿವ ಬಲೆಗಳು
ಬಿಡಿ ಮರಳಿನ ಮೇಲೆ ನಡೆವ
ಅರೆ ಬೆತ್ತಲ ಜನಗಳು
ತಡೆ ಇಲ್ಲದ ಈ ನೋಟಕೆ
ಎಂದೂ ಸಿಗದು ಗೆಳೆಯ
ಹಿಡಿದ ದುಃಖ ಹೊರಗೆಡಹದ
ಮೌನದ ಕೆಲ ಮನಗಳು
-ಮಾಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!