ಪಿಸು ಮಾತಿದು ಗೆಳೆಯ!
ಧಗ ಧಗಿಸದೆ ಉರಿಯ
ತಿದಿ ಒತ್ತಿದ ಕುಲುಮೆ?
ನಮ್ಮಿಬ್ಬರ ಹೃದಯ
ತುಟಿಯೊತ್ತಲು ತುಟಿಗೆ
ಚಿಮ್ಮಿಸದೆ ಇರದೆ
ತುದಿ ಇಲ್ಲದ ಕುಲುಮೆ?!
*******
ಹತ್ತಿದ್ದೇನೆ ಈಗ
ಹರಯದ ಹಡಗ
ಹುಚ್ಚು ಹೊಳೆಯಲ್ಲಿ
ತೇಲಿಸದೆ
ಮುಳುಗಿಸುವ
ನಾವಿಕನಾಗಿ ನೀನು
ಬರುವೆಯ ಹುಡುಗಾ?!
-ಮಾಲು
ಪ್ರತಿಕ್ರಿಯೆ (1)