ಕನಸಿನ ಜೊತೆಯಲಿ, ನೆನಪಿನ ಮಡಿಲಲಿ
ಒಲವಿನ ಮಳೆ ಹನಿಯು ಸುರಿದಿದೆ
ಕೇವಲ ಉಸಿರಲಿ ಹಾಡುವ ಹಾಡಲಿ
ನೆನೆದು ನಿನ್ನನ್ನು ಜೊತೆ ಕರೆಯುವೆ !!
ಮನಸಿನ ಮೂಲೇಲಿ ಕೂಡಿಟ್ಟ ಪದದಲಿ
ಕವಿತೆಯ ಕೊರಳಲಿ, ನಿನ್ನ ದನಿಯು ಸೇರಲಿ,
ಸಾವಿರ ಸ್ವರದಲಿ, ಬರೆಯುವ ಹೆಸರಲಿ,
ನೆನೆದು ನಿನ್ನನ್ನು ಜೊತೆ ಕರೆಯುವೆ !!
ನೋಡುವ ಲೋಕದಿ, ಕಂಡ ಈ ನೋಟದಿ
ಭಾವನೆಯ ಸುಳಿಯಲಿ, ಮೂಡುವ ಗುಳಿಯಲಿ
ಸುಳಿಯುವ ಗಾಳಿಲಿ, ಬಣ್ಣಗಳ ಹರಡಿದ ಬಾಳಲಿ
ನೆನೆದು ನಿನ್ನನ್ನು ಜೊತೆ ಕರೆಯುವೆ !!
ನಡೆಯುವ ಹಾದಿಲಿ, ನೀಡಿದ ಆಣೆಲಿ,
ಪಯಣದ ಜೊತೆಯಲಿ, ನುಡಿದ ಪದದಲಿ,
ಕೂಗುವ ಹೆಸರಲಿ, ಹೆಜ್ಜೆಯ ಸದ್ದಲಿ
ನೆನೆದು ನಿನ್ನನ್ನು ಜೊತೆ ಕರೆಯುವೆ !!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)