ಅದೊಂದು ಸುಂದರ ತಾಣ, ಅಲ್ಲಿ ಮೂಡಿತ್ತು ಮಧುರ ಗಾನ
ಕುಪ್ಪಳಿಸುತ್ತ ಅಲ್ಲಿಗೆ ತೆರೆಳ ಬೇಕಂತೆ, ಅದು ಆ ಜಾಗದ ಮಹತ್ತಂತೆ
ಮೋಡ ಬೆಟ್ಟಗಳ ಚುಂಬಿಸುವ ಜಾಗ, ಕಡಿಮೆಯಾದಿತು ನಾನು ಕರೆದರೆ ಅದನ್ನು ಸ್ವರ್ಗ
ಹಸಿರಿನ ಬನದ ಅಂಶ ಆ ಬನ, ಅಲ್ಲಿ ಮಹಾ ಕವಿಯ ಜನನ!
___LINK_OPEN_href="http://1.bp.blogspot.com/-ubAGYAOnrQw/T9cxbZYl_6I/AAAAAAAACzU/5LVAbm0EBe0/s1600/IMG_3677.JPG"___
___LINK_OPEN_href="http://1.bp.blogspot.com/-w6sXPNmDOXQ/T9cxjXMigdI/AAAAAAAACzg/TNwmxVradcY/s1600/IMG_3607.JPG"___
ಕೈಲಾಸ ಅದು ಕವಿತೆಗೆ ಸ್ಫೂರ್ತಿ, ಆ ಕವಿ ಸಾಧಿಸಿದ್ದು ಮಹಾನ್ ಕೀರ್ತಿ
ಈ ಶಿಖರ ಕವಿಗೆ ಅಚ್ಚುಮೆಚ್ಚು, ಅಲ್ಲಿ ಮುದ್ರಣವಾಗುತ್ತಿತ್ತು ಕವಿ ಬರವಣಿಗೆಯ ಅಚ್ಚು
ಗುಂಗುರು ಕೂದಲಿನ ಕವಿಗೆ ಆ ಕವಿತೆಗಳೇ ಜೀವಾಳ
ಇದನೆಲ್ಲಾ ಬಣ್ಣಿಸುತಿದೆ ಕವಿ ಶೈಲ
ಪ್ರದಕ್ಷಿಣೆ ಮಾಡಿದೆ ಕಣ್ಣೋತ್ತಿ ನಡೆದೇ ಆ ಕವಿಯ ಮನೆಗೆ,
ಜೀವಂತವಾಗಿ ಕಂಡರು ಆ ಕವನಗಳಲ್ಲಿ ನನಗೆ
ಮನೆಯಲ್ಲ ಅದು ಕವಿಯ ಕಾವ್ಯ ತಾಜಮಹಲು
ಮನದಲ್ಲಿ ಮುಡಿಸೂತ ಕವನದ ಅಲೆಯ ಕಡಲು
ನನ್ನ ಹೃದಯ ಪೂರ್ವಕ ವಂದನೆಗಳು ನಿಮಗೆ
ಈ ಕವನ ರಾಷ್ಟ್ರ ಕವಿಯ ಪಾದಾರವಿಂದಗಳಿಗೆ
ಹರಸಿ ನಮ್ಮನು ಈ ಸಾಹಿತ್ಯವ ಬೆಳೆಸಲು
ಕನ್ನಡತಿಯ ಋಣ ತೀರಿಸಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!