ಸೆಳೆಯಿತಂದು ನಿನ್ನ ಕಡೆಗೆ
ಕಣ್ಣ ಪ್ರೇಮ ಜ್ಯೋತಿ
ದೃಷ್ಟಿ ಸೇರಿಸಲಿತ್ತು ಮನಕೆ
ಕಳೆದು ಹೋಗೊ ಭೀತಿ.
ಮರುಳಾದೆನು ಒಲುಮೆ ನುಡಿಗೆ
ಕಿವಿಗೆ ಕೇಳೊ ಭ್ರಾಂತಿ
ಮನದ ಮಾತು ತುಟಿಗೆ ಬರದೆ
ನಾಶವಾಗಿತ್ತು ಶಾಂತಿ
ಬೇಡವಾಗಿತ್ತು ವಿಷಯ ಬೇರೆ
ಅದುವೆ ಏನೊ ಪ್ರೀತಿ
ಜೊತೆಯಾದೆನು ಬಾಳ ನಡೆಗೆ
ಮನಸ್ಸಿಗೇನೊ ತೃಪ್ತಿ.
ಶಾರಿಸುತೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!