ಹಸಿದ ಹಲವು ಹೊಟ್ಟೆಗಳಿಗೆ
ತುತ್ತ ಬಡಿಸಿ ಹಸಿವ ತಣಿಸಿದಂತೆ;
 
ದುಡಿದ ದಿನದ ಸಂಜೆಯಲ್ಲಿ 
ಮದಿರೆ ಕುಡಿಸಿ ಮತ್ತ ತರಸುವಂತೆ;
 
ಹೊಸೆದು ನನ್ನೆದೆಗೆ  ಎದೆಯ
ಗೆಳೆಯ ಬಂದು ಮುತ್ತ ಸುರಿಸು!
ಹೊಸ ಆಸೆಗಳನು ಬಿಡದೆ ವಿಧಿಯು
ದಿನವು ನಮಗೆ ಎಸೆಯುವಂತೆ!
-ಮಾಲು