ವನಿತೆಯರು ದೀಪವನು 
ಬೆಳಗಿಹರು ಇಲ್ಲಿ 
ದಿವ್ಯ ದೀಪಾವಳಿಯ 
ಶುಭ ಸಂಜೆಯಲ್ಲಿ 
 
ಜಗದ ಚಿತ್ತಾರವನು 
ಬಿಡಿಸಿಹರು ಇಲ್ಲಿ 
ಬಣ್ಣ ಬಣ್ಣಗಳ 
ರಂಗೋಲೆಯಲ್ಲಿ 
 
ದೇವ ನಮಗೆ ನಿನ್ನ 
ಕೃಪೆಯಾಗಲಿ 
ದುಃಖ ದುಮ್ಮಾನಗಳ 
ಕೊನೆಯಾಗಲಿ 
ಸುಖ ಸುಮ್ಮಾನಗಳ 
ಹೊಳೆಯಾಗಲಿ 
-ಮಾಲು