ಹಸಿರಾಡಿಸಿ ಹೂವರಳಿಸಿ 
ಹದ ಮಾಡಿಸಿ ಎದೆಯ 
ಜೊತೆಗೂಡಿಸಿ ಹೊಸ ಹಾಡಿಗೆ 
ಗಿಳಿ ಕೋಕಿಲ ಉಲಿಯ 
 
ಕಾಲಿಟ್ಟಿದೆ ಕದ ತಟ್ಟಿದೆ 
ಹಸನಾಗಿಹ ಹರಯ
 
ನಲಿವೊಂದನೆ ಹರಿಸುವ
ಬಾಳೆಂಬುವ  ತೊರೆಯ 
ತುಂಬಲು ತಾ ಸೆಲೆಯೊಂದನು 
ನನ್ನೊಲವಿನ ಗೆಳೆಯ
-ಮಾಲು