ನಿರ್ವಾಹಕರೆ,
ಸಂಪದದಲ್ಲಿ ಇತ್ತೀಚಿಗೆ ಕೆಲವು ದೇವರು ಹಾಗೂ ಧರ್ಮದ ಕುರಿತು ಕೆಲ ಕೀಳು ಬರಹಗಳು, ಲೇಖನಗಳನ್ನು ಬರೆಯುತ್ತಿದ್ದಾರೆ. ಇದರಿಂದ ವೈಯಕ್ತಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇಂಥಹ ಬರಹ ಅಥವಾ ಲೇಖನಗಳು ಸಂಪದಕ್ಕೆ ಶೋಭೆ ಅಲ್ಲ.
ಎಲ್ಲ ಲೇಖನಗಳನ್ನು ಪರಿಶೀಲಿಸುವುದು ನಿಮಗೆ ಬಹಳ ತ್ರಾಸ ಎಂಬ ಸಂಗತಿ ನನಗೆ ತಿಳಿದಿದೆ ಆದರೆ ಇಂಥಹ ಬರಹಗಳನ್ನು ಕಿತ್ತು ಹಾಕಿದರೆ ಉತ್ತಮ ಎಂದೆನಿಸುತ್ತದೆ.
ಸಂಪದ ಉತ್ತಮ ಬರಹಗಳಿಗೆ ಕಥೆಗಳಿಗೆ ಕವನಗಳಿಗೆ ಸಮೃದ್ಧವಾದ ತಾಣವಾಗಿದೆ. ಇನ್ನು ಮುಂದೆಯೂ ಅದು ಹಾಗೆ ಇರಲೆಂದು ಆಶಿಸುವ ಸಂಪದಿಗ.
ತಮಗೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಪ್ರತಿಕ್ರಿಯೆ (7)