ಪ್ರಿಯಾ,
ನನ್ನೊಪ್ಪಿಗೆ  ಇಲ್ಲದೆ 
ಅಪ್ಪಿದ ತಪ್ಪಿಗೆ 
ತೆರಬೇಕಲ್ಲವೆ  ಸುಂಕ!
ತುಟಿ ತುಟಿಯೊತ್ತಿನ 
ಮುತ್ತನು ಕೊಟ್ಟು 
ತಪ್ಪದೆ ತೀರಿಸು ಲೆಕ್ಕ!
***
ಕೊಟ್ಟರಾಯಿತೆ 
ಒಡಲಿಗೆ ಅಷ್ಟು ತುತ್ತು
ಘಳಿಗೆಗೊಂದು ಮುತ್ತು?
ಕೊಡದಾದೆ ಇದುವರೆಗೆ
ಒಲವನೆದೆಗೆ....

ಪ್ರಿಯಾ,
ನೀನು ನನಗೆ
ಒಪ್ಪಿಲ್ಲದ ಉಡುಗೆ
ಉಪ್ಪಿಲ್ಲದ ಅಡುಗೆ
-ಮಾಲು