ಜೀವನನಾನೆಂದುಕೊಂಡಂತೆಅಲ್ಲದಿದ್ದರೂ...ಬಹಳಕಷ್ಟವಾಗೇನೂಸಾಗುತ್ತಿರಲಿಲ್ಲ. ಹೂವಿನಹಾಸಿಗೆಅಲ್ಲದಿದ್ದರೂಮುಳ್ಳಿನಮಂಚವಂತೂ ಆಗಿರಲಿಲ್ಲ. ಇದ್ದುದದರಲ್ಲೇ ಸಂತೋಷವಾಗಿಜೀವನ ಸಾಗುತ್ತಿತ್ತು. ಹೆಂಡತಿ, ಮುದ್ದಾದ ಮಗು, ಪುಟ್ಟದೊಂದು ಮನೆಎಲ್ಲ ಚೆನ್ನಾಗೆ ಇತ್ತು.

ಹೌದು ಚೆನ್ನಾಗೇ ಇತ್ತು...!! ಈಗ ಚೆನ್ನಾಗಿಲ್ಲ...ಈಗ ಎರಡು ತಿಂಗಳಿಂದ ತಲೆ ಕೆಟ್ಟು ಗೊಬ್ಬರ ಆಗಿ ಹೋಗಿದೆ. ಇದಕ್ಕೆಲ್ಲ ಕಾರಣ?? ನಾನು...ಹೌದು ನಾನು. ಎರಡು ತಿಂಗಳ ಹಿಂದೆ ಗೆಳೆಯನ  ಒತ್ತಡಕ್ಕೆಮಣಿದುಒಂದುಸಮಾರಂಭಕ್ಕೆಹೋಗಿದ್ದೆ. ಸ್ವಲ್ಪಹೊತ್ತುಅದೂಇದೂಅಂತಏನೇನೋಕಾರ್ಯಕ್ರಮಗಳುನಡೆದವು. ಆನಂತರಒಬ್ಬಬುದ್ಧಿಜೀವಿಮಾತನಾಡಿದಭಾಷಣನನ್ನಬದುಕನ್ನೇನಾಶಮಾಡಿಬಿಟ್ಟಿದೆ.

ಆತ ಭಾಷಣ ಮಾಡಲು ಆಯ್ದುಕೊಂಡ ವಿಷಯ "ನಾನು". ಆತ ಭಾಷಣ ಮಾಡುತ್ತಿದ್ದಂತೆ ಮೊದಮೊದಲು ನಾನು ಅಷ್ಟಾಗಿ ಅದರ ಕಡೆ ಗಮನಕೊಡಲಿಲ್ಲ. ಆದರೆ ಒಮ್ಮೆ ಗಮನ ಕೊಟ್ಟ ಮೇಲೆಯಾಕೋ ಆ ಭಾಷಣ ನನ್ನನ್ನು ಆವರಿಸಿಕೊಂಡು ಬಿಟ್ಟಿತ್ತು. ಆತ ಹೇಳುತ್ತಿದ್ದ ವಿಷಯಗಳು ನೇರವಾಗಿ ಸೂಜಿಯಂತೆ ನನಗೆ ಹೇಳುತ್ತಿರುವಂತೆ ಭಾಸವಾಗಿತ್ತು. ಭಾಷಣ ಮುಗಿದು ಸುಮಾರುಹೊತ್ತು ಆಗಿದ್ದರೂ ಅದರ ಗುಂಗಿನಿಂದ ಆಚೆ ಬರಲು ಸಾಧ್ಯವಾಗಿರಲಿಲ್ಲ. ತಲೆ ತುಂಬಾ ಆತ ಹೇಳಿದ ವಿಷಯಗಳೇ ಗಿರಕಿ ಹೊಡೆಯುತ್ತಿದ್ದವು.

ಅಲ್ಲಿಂದ ಮನೆಗೆ ಬಂದ ಮೇಲೂ ಅದರ ಮತ್ತಿನಿಂದ ಆಚೆ ಬರಲು ಸಾಧ್ಯವಾಗುತ್ತಿಲ್ಲ. ಆ ಭಾಷಣ ನನ್ನ ಮೇಲೆ ಅಷ್ಟೊಂದು ಪರಿಣಾಮ ಬೀರಿತ್ತು. ಊಟ ಆದ ಮೇಲೆ ರೂಮಿಗೆಹೋಗಿ ಆತ ಭಾಷಣದಲ್ಲಿ ಹೇಳಿದಂತೆ,ಕನ್ನಡಿಯ ಮುಂದೆ ನಿಂತು ನನ್ನ ಪ್ರತಿಬಿಂಬದ ಕಣ್ಣಿನ ದೃಷ್ಟಿಯನ್ನೇ ದಿಟ್ಟಿಸಿ ನೋಡಿ ಒಂದು ಪ್ರಶ್ನೆ ಕೇಳಿಕೊಂಡೆ. ನಾನು ಯಾರು? ನಾನು ಇಲ್ಲಿಗೇಕೆ ಬಂದಿದ್ದೇನೆ? ಇಲ್ಲಿನನ್ನಕೆಲಸಏನು? ಈಸಂಬಂಧಗಳೆಲ್ಲಯಾಕೆ? ಅಪ್ಪಅಮ್ಮ,ಹೆಂಡತಿ,ಮಗ,ಬಂಧುಗಳು,ಸ್ನೇಹಿತರು,ಒಳ್ಳೆಯದು,ಕೆಟ್ಟದು,ಹುಟ್ಟು,ಸಾವು,ಅಳು,ನೋವು,ದುಃಖ,ಸಂತೋಷ, ಇವೆಲ್ಲದರ ಜೊತೆ ನಾನ್ಯಾಕೆ ಹೊಂದಿಕೊಂಡಿದ್ದೇನೆ?

ಉಫ್...ಒಂದರೆ ಘಳಿಗೆ ತಲೆ ಗಿರ್ ಎಂದುಬಿಟ್ಟಿತು. ನಾನು ಕೇಳಿಕೊಂಡ ಯಾವುದೇ ಪ್ರಶ್ನೆಗೂ ನಿಖರವಾದ ಉತ್ತರ ಸಿಗುತ್ತಿಲ್ಲ. ಮತ್ತೆ ಕನ್ನಡಿಯಲ್ಲಿ ನೋಡಲು ಭಯ ಆಗುತ್ತಿತ್ತು. ಮತ್ತೆ ಮತ್ತೆ ಅದೇ ಪ್ರಶ್ನೆಗಳು ಬೂಮರಾಂಗ್ ಹಾಗೆ ಬಂದೆರಗುತ್ತಿತ್ತು. ಛೆ...ಇದೇನಿದು ಹೀಗಾಗುತ್ತಿದೆ. ಅಷ್ಟರಲ್ಲಿ ಹಿಂದಿನಿಂದಬಂದ ಹೆಂಡತಿ ಇದೇನ್ರಿ? ಮನೆಗೆ ಬಂದಾಗಿನಿಂದ ಒಂದು ರೀತಿಇದ್ದೀರಾ? ಯಾಕೆ ಹುಷಾರಿಲ್ವಾ ಎಂದು ಹಣೆಮುಟ್ಟಿ  ನೋಡಿದಳು. ಜ್ವರ ಏನೂಇಲ್ಲವಲ್ಲ....

ಈ ವಿಷಯಗಳನ್ನು ಅವಳ ಬಳಿ ಹೇಳಿದರೆಅವಳು ಲೇವಡಿ ಮಾಡಿಬಿಡಬಹುದು, ಇಲ್ಲವಾದರೆ ತಲೆ ಕೆಟ್ಟಿದೆ ಎನ್ನುವಳುಎಂದುಕೊಂಡು ಏನಿಲ್ಲಕಣೆ ಆರಾಮಾಗೆ ಇದ್ದೀನಿಎಂದು ಅವಳ ಕಣ್ಣೋಟವನ್ನು ತಪ್ಪಿಸಿಕೊಂಡು ಒಳಗೆ ಹೋದೆ.

ಆ ರಾತ್ರಿಯೆಲ್ಲ ಅದೇ ಯೋಚನೆ. ನಾನು ಯಾರು? ಇದೆಲ್ಲ ಏನು? ಈ ಜವಾಬ್ದಾರಿ ಎಲ್ಲ ಯಾಕೆ? ಅಯ್ಯೋ....ಹುಚ್ಚುಹಿಡಿಯುತ್ತಿದೆ....ಹಾಗೂ ಹೀಗೂ ಕಷ್ಟಪಟ್ಟು ಬೆಳಗಿನ ಜಾವ ನಿದ್ದೆಹತ್ತಿತ್ತು. ತಡವಾಗಿ ಮಲಗಿದಪರಿಣಾಮ ಎದ್ದಾಗ ತಡವಾಗಿತ್ತು. ಹಾಗೆ ಆಫೀಸಿಗೆಹೋದೆ. ಅಲ್ಲೂ ಸಹ ಅದೇ ಅದೇ ಯೋಚನೆಗಳು..ಒಂದಕ್ಕೂ ಉತ್ತರ ಸಿಗುತ್ತಿಲ್ಲ. ಯಾರ ಬಳಿಯೂ ಹೇಳುವಹಾಗಿಲ್ಲ. ಇದೇನಿದು ನನ್ನ ಪರಿಸ್ಥಿತಿ? ಅಂತರ್ಜಾಲದಲ್ಲಿ ಏನಾದರೂಮಾಹಿತಿ ಸಿಗಬಹುದೇನೋ ಎಂದು ಎಲ್ಲ ತಾಣಗಳಲ್ಲೂ ಹುಡುಕಾಡಿದೆ....ಊಹುಂ....ಇಲ್ಲ.

ಯಾವುದಾದರೂ ಲೈಬ್ರರಿಗೆ ಹೋಗಿ ಸಂಬಂಧಪಟ್ಟ ಪುಸ್ತಕಗಳು ಏನಾದರೂ ಸಿಗಬಹುದೇನೋ ಎಂದು ಹುಡುಕಾಡಿದೆ...ಇಲ್ಲ ಅದರ ಪ್ರಯೋಜನವಾಗಲಿಲ್ಲ. ದಿನಗಳು ಕಳೆಯುತ್ತಿದ್ದಂತೆ ನನ್ನ  "ನಾನು" ಸಮಸ್ಯೆಯೂಉಲ್ಬಣವಾಗುತ್ತ ಹೋಯಿತು. ಈಚೀಚೆಗೆಹೆಚ್ಚುಒಂಟಿಯಾಗಿಇರಲುಮನಸ್ಸುಬಯಸುತ್ತಿದೆ. ಒಬ್ಬೊಬ್ಬನೇಊರುಗಳನ್ನುಸುತ್ತಿದೆ. ಆಸಮಸ್ಯೆಯನ್ನುತಲೆಯಿಂದಕಿತ್ತುಹಾಕಲುಏನೇನೋಪ್ರಯತ್ನಮಾಡಿದರೂಪರಿಹಾರಸಿಗಲಿಲ್ಲ.

ಒಮ್ಮೆಹೀಗೆಯಾವುದೋಒಂದುಊರಿನಿಂದಮನೆಗೆವಾಪಸ್ಬಂದಾಗಮನೆಯಲ್ಲಿಯಾರೋಒಬ್ಬವಯಸಾದವ್ಯಕ್ತಿಕುಳಿತಿದ್ದರು. ಆತನವಯಸ್ಸುಅಂದಾಜುಎಂಭತ್ತುವರ್ಷಇರಬಹುದು. ಹೊಟ್ಟೆಯತನಕಬೆಳೆದಿದ್ದಬೆಳ್ಳನೆಗಡ್ಡವನ್ನುನೋಡಿಅವರವಯಸನ್ನುಅಂದಾಜಿಸಿದ್ದೆ. ಅವರಕಣ್ಣುಗಳಲ್ಲಿಅದೆಂಥದೋತೇಜಸ್ಸುಹೊಳೆಯುತ್ತಿತ್ತು. ಅವರನ್ನುನೋಡಿದತಕ್ಷಣಅದ್ಯಾಕೋಗೊತ್ತಿಲ್ಲಅವರಕಾಲಿಗೆಬಿದ್ದುನಮಸ್ಕರಿಸಬೇಕುಎಂದೆನಿಸಿತು. ಅವರಿಗೆನಮಸ್ಕಾರಮಾಡುತ್ತಿದ್ದಂತೆಒಳಗಿನಿಂದನನ್ನಹೆಂಡತಿಬಂದಳು.

ಎರಡುತಿಂಗಳಿಂದನನ್ನ "ನಾನು" ಸಮಸ್ಯೆಯಿಂದಅವಳೂಸಾಕಷ್ಟುಬಳಲಿದ್ದಳು. ಅದನ್ನುಅವಳಕಣ್ಣುಗಳೇಹೇಳುತ್ತಿತ್ತು. ಅವಳುಬಂದೊಡನೆಅವಳನ್ನುನೀನುಸ್ವಲ್ಪಹೊತ್ತುಆಚೆಇರಮ್ಮಎಂದುಆವಯಸಾದವ್ಯಕ್ತಿಅವಳಿಗೆಹೇಳಿದರು. ಅವಳುಸುಮ್ಮನೆತಲೆಯಾಡಿಸಿಮಗುವನ್ನುಕರೆದುಕೊಂಡುಹೊರನಡೆದಳು. ನಾನುಏನೂಮಾತನಾಡದೆಸುಮ್ಮನೆಆವ್ಯಕ್ತಿಯನ್ನೇನೋಡುತ್ತಿದ್ದೆ.

ಅವರುನನ್ನತಲೆಯಮೇಲೆಕೈಯಾಡಿಸಿಮಗುನಿನ್ನಸಮಸ್ಯೆಏನುಎಂದರು. ನಾನುಅವರಿಗೆನನ್ನ "ನಾನು" ಸಮಸ್ಯೆಯನ್ನುವಿವರಿಸಿದೆ. ಅವರುಶಾಂತವಾಗಿಎಲ್ಲಕೇಳಿಒಂದುಮಂದಹಾಸವನ್ನುಬೀರಿದರು. ಮಗು, ಈಜಗತ್ತುಎನ್ನುವುದುಭಗವಂತನಕಾರ್ಖಾನೆಯಂತೆ. ನಾವೆಲ್ಲರೂಇಲ್ಲಿಕಾರ್ಮಿಕರಂತೆ. ನಿನ್ನಮನೆಆಕಾರ್ಖಾನೆಯಒಂದುವಿಭಾಗವಿದ್ದಂತೆ. ಇಲ್ಲಿ ನಿಮ್ಮ ತಂದೆ ತಾಯಿಯರೇ ನಿನಗೆ ಮುಖ್ಯಸ್ತರು. ನಿನ್ನಪತ್ನಿ ನಿನ್ನ ಪಾಲುದಾರಳಂತೆ, ನಿನ್ನ ಮಕ್ಕಳು ಬೋನಸ್ ಇದ್ದಂತೆ, ಬಂಧುಗಳು ಸ್ನೇಹಿತರು ಇವರೆಲ್ಲನಿನ್ನಸಹೋದ್ಯೋಗಿಗಳಂತೆ.

ನೀನು ಬೆಳೆಯುತ್ತ ಹೋದಂತೆ ಒಂದೊಂದು ಹಂತದಲ್ಲಿ ಒಂದೊಂದು ಪ್ರಮೋಷನ್ನು ಸಿಗುತ್ತದೆ, ಪ್ರಮೋಷನ್ನು ಸಿಕ್ಕಂತೆ ನಿನ್ನ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಅವರವರ ಕರ್ಮಾನುಸಾರ ಒಬ್ಬೊಬ್ಬರಿಗೆ ಇಂತಿಷ್ಟು ವರ್ಷ ಕೆಲಸ ಎಂದು ಆ ಭಗವಂತ ಮುಂಚೆಯೇ ನಿರ್ಧರಿಸಿರುತ್ತಾನೆ. ಅವರ ಕೆಲಸ ಮುಗಿದ ಮೇಲೆ ಅವನೇ ನಿವೃತ್ತಿ ಕೊಟ್ಟುಬಿಡುತ್ತಾನೆ. ಕೆಲವರು ಮುಂಚೆಯೇ ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತಾರೆ!!! ಆದರೆ ಅದು ಪರಿಪೂರ್ಣವಾಗಿರುವುದಿಲ್ಲ.

ಯಾರು ಭಗವಂತ ಕೊಟ್ಟ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಅವರಜೀವನ ಸಾರ್ಥಕವಾಗಿರುತ್ತದೆ. ಇಷ್ಟು ಹೇಳಿ ಆ ವ್ಯಕ್ತಿ ಸರಿ ಮಗುನಾನಿನ್ನು ಹೊರಡುತ್ತೀನಿ. ನನಗಿನ್ನೂ ಬಹಳಷ್ಟು ಕೆಲಸ ಇದೆ ಎಂದು ಹೊರಡಲು ಅನುವಾದರು. ನಾನು ಅವರೊಡನೆ ಎದ್ದು, ಸ್ವಾಮಿ, ನನ್ನ ತಲೆಯಲ್ಲಿ ಕೊರೆಯುತ್ತಿದ್ದ "ನಾನು" ಎಂಬ ಸಮಸ್ಯೆ ಈಗ ಬಗೆಹರಿಯಿತು. ಆದರೆ ತಾವು ಯಾರು ಸ್ವಾಮಿ? ಇಷ್ಟು ಹೊತ್ತು "ನಾನು ಯಾರು?" ಎಂಬ ಪ್ರಶ್ನೆ ಕಾಡುತ್ತಿತ್ತು. ಈಗ "ತಾವು ಯಾರೆಂಬಪ್ರಶ್ನೆಯೇ?" ಹ್ಹ...ಹ್ಹ...ಹ್ಹ...ಎಂದು ನಗುತ್ತಾ ಆ ವ್ಯಕ್ತಿ ಹೊರಟು  ಹೋದರು.

ಅವರು ಹೊರಟ ಮೇಲೆ ನನ್ನ ಹೆಂಡತಿ ಒಳಗೆಬಂದಳು.ನಾನು ಅವಳನ್ನು ಯಾರೇ ಅವರುಎಂದಿದ್ದಕ್ಕೆ,ಅವರು ನನ್ನ ತಾತ,ಊರಿನಿಂದ ಬಂದಿದ್ದರು.ನಿಮ್ಮ ಸಮಸ್ಯೆಗೆ ಪರಿಹಾರ ಹೇಳಲೆಂದು ನಾನೇ ಅವರನ್ನು ಕರೆಸಿದ್ದೆ ಎಂದಳು. ನನಗೆ ಆಶ್ಚರ್ಯ!! ಅಲ್ಲ ಕಣೇ ನಾನು ನನ್ನ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಅದು ಹೇಗೆನಿನಗೆ ಗೊತ್ತಾಯಿತು?

ಮಹಾಪ್ರಭು ತಾವು ನಿದ್ದೆಯಲ್ಲೂ ನಾನು ಯಾರು? ನಾನು ಯಾರು? ನಾನ್ಯಾಕೆ ಇಲ್ಲಿದ್ದೇನೆ? ಇವರೆಲ್ಲ ನನಗೇನಾಗಬೇಕು? ಎಂದು ಪ್ರತಿದಿನ ಕನವರಿಸುತ್ತಿದ್ದೀರಲ್ಲ. ಅದಕ್ಕೆನಾನೇ ಅವರನ್ನು  ಕರೆಸಿದೆ. ಅದುಸರಿಕಣೆಅವರುಏನುಓದಿದ್ದಾರೆ? ಅಷ್ಟೊಂದುತಿಳಿದುಕೊಂಡಿದ್ದಾರೆ?

ರೀ...ಅವರುಜೀವನವನ್ನುಓದಿದ್ದಾರೆಅಷ್ಟೇಎಂದುನಕ್ಕಳು.

(ಇತ್ತೀಚಿಗೆ ಪಾರ್ಥಸಾರಥಿಯವರು ಬರೆದ ಲೇಖನ "ನಾನು" ಎಂಬ ವಿಷಯದಿಂದ ಸ್ಪೂರ್ತಿ ಪಡೆದು ಬರೆದ ಕಥೆ ಇದು)