ಅಂದು ಅಂಕೆಯಲಿದ್ದೆ ನಾನು
ಬಂದು ಕರೆದೊಯ್ದೆ ನೀನು
ಬೆಂಕಿ ತಗುಲಿಸಿ ಬೇಲಿಗೆ;
ಹಲವು ದಿನಗಳು ಬಾಳಲಿಲ್ಲ
ಒಲವು ಹಾಗೆ ಬಾಡಿತಲ್ಲ
ಶಂಕೆಯದು ಚಾಚಿತು ನಾಲಿಗೆ ;
ಕೊಂಕು ಮಾತನು ಹೊಸೆದೆಯಲ್ಲ
ಮಂಕು ಕವಿಸಿ ಮನಕೆ ನೀನು
ಉರಿಯ ಹಚ್ಚಿ ಹೂ ಮಾಲೆಗೆ;
ನೇಯ್ದ ಕನಸೆಲ್ಲ ಕೊಯ್ದೆ
ನಾಳೆ ಬಾಳನು ಎಳೆದು ಒಯ್ದೆ
ಹಾಲಹಲವನು ಬೆರೆಸಿ ಬೆಳ್ನೊರೆ ಹಾಲಿಗೆ.
-ಮಾಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!