ಚಂದ್ರನಿಲ್ಲದ ಇರುಳು 
ಮೋಡ ಮುಸುಕಿದ ಮುಗಿಲು  
ಮಿಣುಕು ತಾರೆಯ ಕೊಂಚ 
ಬೆಳಕು ಇಲ್ಲ;
ಮನದಿ ಹುದುಗಿದೆ ದಿಗಿಲು 
ಕೊರಳ ಬಿಗಿದಿದೆ ಅಳಲು 
ಹಾಳು ಸುರಿದಿದೆ ಮಂಚ 
ಗೆಳೆಯನಿಲ್ಲದ ಬಾಳು 
ಬಾಳೆ ಅಲ್ಲ.
-ಮಾಲು