ಹಲೋ....ಹಲೋ...ಲೋ..ಲೋ...ಮಧುಏನೋಆಗಿಂದಮೂರುಸಲಕರೆಯುತ್ತಿದ್ದೇನೆ. ಒಳ್ಳೆಕಿವುಡನಹಾಗೆಕೂತಿದ್ದೀಯ. ಯಾಕೋಏನಾಯ್ತೋ?

ನಾನುಐದಾರುದಿನದಿಂದನೋಡ್ತಾಇದೀನಿ. ಒಂಥರಾಇದ್ದೀಯ? ಯಾಕೋಹುಷಾರಿಲ್ವಾ?

ಇಲ್ಲಹರಿ...ಹಾಗೇನಿಲ್ಲಕಣೋ. ಐದುದಿನಆಯ್ತುಪೂರ್ವಿಇಂದಒಂದುಫೋನ್ಸಹಇಲ್ಲ. ಫೋನ್ಮಾಡಿದ್ರೆಸ್ವಿಚ್ಆಫ್ಅಂತಬರ್ತಿದೆ, ಅವಳುಆಫೀಸಿಗೂಬರುತ್ತಿಲ್ಲ. ಏನಾಯ್ತೋಏನೋಒಂದೂಅರ್ಥಆಗದೆತಲೆಕೆಟ್ಟುಹೋಗಿದೆಕಣೋ.

ಹೋಗಲಿಅವಳಟೀಮ್ನಲ್ಲಿಕೇಳೋಣಅಂದ್ರೆಅಲ್ಲಿಯಾರೂನನಗೆಪರಿಚಯದವರುಇಲ್ಲ. ಅವಳಮನೆಯಅಡ್ರೆಸ್ಸೂಅವಳುಕೊಟ್ಟಿಲ್ಲಕಣೋ. ಹಿಂದೊಮ್ಮೆಕೊಡುಎಂದಿದ್ದಕ್ಕೆಸಮಯಬಂದಾಗಮನೆಗೆಕರೆದುಕೊಂಡುಹೋಗುತ್ತೀನಿಎಂದಿದ್ದಳು.ಥೂ...ನನಗೆಯಾಕೋಮನಸೇಸರಿಇಲ್ಲಕಣೋ. ಅವಳುನನ್ನನ್ನುಪ್ರೀತಿಸಲುಶುರುಮಾಡಿಆರೇಳು ತಿಂಗಳಾಗಿದೆ. ಯಾವತ್ತೂ ಹೀಗೆಆಗಿರಲಿಲ್ಲ.

ಪ್ರತಿದಿನ ಕನಿಷ್ಠ ಪಕ್ಷ ಏನಿಲ್ಲಅಂದರೂ ಹತ್ತರಿಂದಇಪ್ಪತ್ತು ಸಲ ಫೋನ್ ಮಾಡುತ್ತಿದ್ದವಳು ಈಗ ಐದು ದಿನವಾದರೂ ಫೋನಿಲ್ಲ. ಯಾರಾದರೂ ಸ್ನೇಹಿತರ ಮನೆಗೋ, ಬಂಧುಗಳಮನೆಗೆಹೋಗಬೇಕಾದರೂನನಗೆಫೋನ್ ಮಾಡಿ ಹೇಳುತ್ತಿದ್ದವಳು ಈಗ ಎಲ್ಲಿಹೋಗಿದ್ದಾಳೋ, ಹರಿ ಈಗ ಏನು ಮಾಡುವುದು?

ಮಧುನೀನು ಲಾಸ್ಟ್ ಅವಳ ಜೊತೆ ಮಾತಾಡಿದ್ದುಯಾವತ್ತು?

ಹರಿ, ಐದಾರು ದಿನದ ಹಿಂದೆ ಹಾ...ಕರೆಕ್ಟ್ ಅವತ್ತು ಆಗಸ್ಟ್ 14, ಮರುದಿನ ಸ್ವಾತಂತ್ರ್ಯ ದಿನಾಚರಣೆ ರಜೆಇತ್ತು. ರಾತ್ರಿ ಊಟ ಆದ ನಂತರ ಮಾಮೂಲಿನಂತೆಸುಮಾರು ಒಂದು ಘಂಟೆ ಮಾತನಾಡಿ ಫೋನ್ ಇಟ್ಟೆವು. ಮರುದಿನ ಪೂರ್ತಿ ಮನೆಯವರ ಜೊತೆ ಆಚೆ ಹೋಗುತ್ತೇನೆ ಫೋನಿನಲ್ಲಿ ಮಾತಾಡಲು ಆಗುವುದಿಲ್ಲ ಎಂದಿದ್ದಳು. ಆದರೆ ಮರುದಿನದಿಂದಲೇ ಅವಳ ಫೋನ್ ಆಫ್ ಬರುತ್ತಿದೆ.

ಹೇ ಮಧು...ಹೌದು ನೀನು ಯಾವಾಗಲೂ ಪೂರ್ವಿ ಜೊತೆ ಫೇಸ್ಬುಕ್ ನಲ್ಲಿ ಚಾಟ್ ಮಾಡುತ್ತಿದ್ದೆ ಅಲ್ವ...ಅಲ್ಲಿ ಟ್ರೈ ಮಾಡಿ ನೋಡು ಅವಳನ್ನು ಸಂಪರ್ಕಿಸಲು.

ಹೌದು ಹರಿ...ಆದರೆ ಅದೇನೋ ಗೊತ್ತಿಲ್ಲಅದೇ ದಿನದಿಂದ ಅವಳ ಪ್ರೊಫೈಲ್ ಫೇಸ್ಬುಕ್ ನಲ್ಲೂಕಾಣುತ್ತಿಲ್ಲ.

ಹೌದಾ, ಅಂದರೆ ಅವಳು ನಿನ್ನಪ್ರೊಫೈಲನ್ನು ಡಿಲೀಟ್ ಮಾಡಿದ್ದಾಳ?

ಅದು ಸಾಧ್ಯವೇ ಇಲ್ಲ ಹರಿ...ಅವಳೇಕೆ ನನ್ನ ಪ್ರೊಫೈಲನ್ನು ಡಿಲೀಟ್ ಮಾಡುತ್ತಾಳೆ? ನಮ್ಮಿಬ್ಬರ ನಡುವೆ ಯಾವುದೇ ಜಗಳ ಆಗಿಲ್ಲ...ಏನೂ ಇಲ್ಲ...ಹರಿ ಏನೋ ಯಡವಟ್ಆಗಿದೆ ಎನಿಸುತ್ತಿದೆಕಣೋ...ಬಹುಶಃ ಅವರ ಮನೆಯಲ್ಲಿ  ಅವಳಿಗೆಮದುವೆಏನಾದರೂಮಾಡಿಬಿಟ್ಟಿದ್ದಾರ? ಹರಿಹಾಗೇನಾದರೂಆದರೆನಾನುಜೀವಂತವಾಗಿಉಳಿಯಲ್ಲ.

ಲೇಹುಚ್ಚುಹುಚ್ಚಾಗಿಮಾತಾಡಬೇಡ. ಮೊದಲುಅವಳುಯಾವಟೀಮ್ಹೇಳು.

ಅವಳುಇನ್ಸೂರೆನ್ಸ್ಟೀಮಿನಲ್ಲಿಇದಾಳೆಕಣೋ.

ಓಹ್ಓಕೆ..ಅಲ್ಲಿನನಗೆಪರಿಚಯಇರುವವ್ಯಕ್ತಿಒಬ್ಬನಿದ್ದಾನೆ. ಅವನಬಳಿಕೇಳಿತಿಳಿದುಕೊಂಡುನಾನುನಿನಗೆತಿಳಿಸುತ್ತೇನೆ. ನೀನುಇಲ್ಲೇಇರು.

ಅರ್ಧಗಂಟೆಯನಂತರ.

ಮಧು...ಮಧು...ಸಾರಿ...ಬ್ಯಾಡ್ನ್ಯೂಸ್ಕಣೋ....

ಹರಿ...ನನಗೆಗೊತ್ತಿತ್ತುಕಣೋಅವಳಿಗೆಬೇರೆಹುಡುಗನಜೊತೆಮದುವೆಮಾಡಿರುತ್ತಾರೆಎಂದು. ಛೇ...ನನ್ನಅನುಮಾನನಿಜಆಗೋಯ್ತುಕಣೋ...

ಮಧುಅದಲ್ಲಕಣೋ...ಅದುಆಗಸ್ಟ್ 15 ರಂದುಬೆಳಿಗ್ಗೆಅವರತಾಯಿಹೋಗಿಬಿಟ್ಟರಂತೆಕಣೋ. ಅದಕ್ಕೆಅವಳುಆಫೀಸಿಗೆಬರುತ್ತಿಲ್ಲವಂತೆ. ನಾಳೆಯಿಂದಬರುತ್ತಾಳೆ. ಆದರೆಅದಕ್ಕೂನಿನ್ನಜೊತೆಮಾತಾಡದಿರುವುದಕ್ಕೂಏನುಸಂಬಂಧಎಂದುಅರ್ಥವಾಗುತ್ತಿಲ್ಲ.

ಓಹ್ಹೌದಾ....ಅವಳುನನಗೆವಿಷಯವನ್ನೂತಿಳಿಸಿಲ್ಲವಲ್ಲೋ....ಅವತ್ತುಬೇಡಬಿಡು...ಅವಳುದುಃಖದಲ್ಲಿರುತ್ತಾಳೆಆದರೆ...ಮರುದಿನವಾದರೂತಿಳಿಸಬಹುದಿತ್ತು....ಬಿಡುಹೇಗಿದ್ದರೂನಾಳೆಬರುತ್ತಾಳಲ್ಲಆಗಲೇಮಾತಾಡುತ್ತೇನೆ.

ಮರುದಿನ....ಮಧ್ಯಾಹ್ನಊಟದಸಮಯ...ಸ್ಥಳಆಫೀಸ್ಕ್ಯಾಂಟೀನ್

ಹಾಯ್ಪೂರ್ವಿ...ಇವನಮಾತನ್ನುಕೇಳಿಯೂಕೇಳದಂತೆಸುಮ್ಮನೆಊಟಮಾಡುತ್ತಿದ್ದಳು.

ಪೂರ್ವಿ...ಸಾರಿನಿಮ್ಮತಾಯಿಹೋಗಿಬಿಟ್ಟರಂತೆ. ನನಗೆನೆನ್ನೆತಾನೇವಿಷಯಗೊತ್ತಾಯ್ತು...ಐಆಮ್ವೆರಿಸಾರಿಫಾರ್ದಟ್..

ಏನು....ನೆನ್ನೆನಿನಗೆಗೊತ್ತಾಯ್ತ? ಆಮಾತುಹೇಳುವುದಕ್ಕೆನಾಚಿಕೆಆಗುವುದಿಲ್ವಎಂದುಮುಖಸಿಂಡರಿಸಿಕೊಂಡುಅಲ್ಲಿಂದಎದ್ದುಕೈತೊಳೆದುಕೊಳ್ಳಲುಹೋದಳು. ಮಧುವಿಗೆಮುಖಕ್ಕೆಹೊಡೆದಹಾಗಾಗಿ...ಅವಳಹಿಂದೆಯೇಹೋದ.

ಪೂರ್ವಿ...ಪ್ಲೀಸ್ನನಗೊಂದೂಅರ್ಥಆಗುತ್ತಿಲ್ಲ. ಹದಿನೈದನೆತಾರೀಖಿನಿಂದನಿನ್ನಫೋನ್ಆಫ್ಎಂದುಬರುತ್ತಿದೆ, ಫೇಸ್ಬುಕ್ನಲ್ಲೂನೀನುಸಿಗಲಿಲ್ಲನನಗೆವಿಷಯಗೊತ್ತಾಗಿದ್ದೆನೆನ್ನೆ. ಅದೂಸಹನನ್ನಸ್ನೇಹಿತಹರಿನಿಮ್ಮಟೀಮ್ಮೇಟ್ಬಳಿವಿಚಾರಿಸಿದಮೇಲೆಯೇಗೊತ್ತಾಗಿದ್ದು. ಆದರೆನೀನುನೋಡಿದರೆಹೀಗೆಹೇಳುತ್ತಿದ್ದೀಯ? ಪ್ಲೀಸ್ಪೂರ್ವಿನನಗೆಎಲ್ಲಗೊಂದಲಮಯವಾಗಿದೆ. ನನ್ನಿಂದಏನಾದರೂತಪ್ಪಾಗಿದ್ದರೆತಿಳಿಸು.

ಮಧು...ನಿಜವಾಗಿಯೂನಿನಗೆನಿನ್ನತಪ್ಪುಗೊತ್ತಿಲ್ಲ್ವ? ಬಾನಿನ್ನತಪ್ಪುಏನೆಂದುತೋರಿಸುತ್ತೇನೆ...ಎಂದುತನ್ನಲ್ಯಾಪ್ಟಾಪ್ಓಪನ್ಮಾಡಿಫೇಸ್ಬುಕ್ಓಪನ್ಮಾಡಿಐದುದಿನದಹಿಂದೆಅವಳುಹಾಕಿದ್ದಸ್ಟೇಟಸ್ಅನ್ನುತೋರಿಸಿದಳು. "Today is the most sad day in my life, my mother passed away this morning". ನೋಡು ಮಧು ಈಗಲಾದರೂ ಗೊತ್ತಾಯ್ತ ನಿನ್ನ ತಪ್ಪೇನೆಂದು?

ಪೂರ್ವಿ ನಿಜ ಹೇಳಬೇಕೆಂದರೆ ಈಗಲೂ ನನ್ನತಪ್ಪೇನೆಂದು ಅರ್ಥವಾಗುತ್ತಿಲ್ಲ. ಹೌದು ನೀನು ನನ್ನ ಪ್ರೊಫೈಲನ್ನು ಡಿಲೀಟ್ ಮಾಡಿದ್ದೀಯ?

ಮಧು ಡಿಲೀಟ್ ಮಾಡದೆ ಇನ್ನೇನು ಮಾಡಬೇಕಿತ್ತು? ನಾನು ಅಂಥಹ ಸ್ಟೇಟಸ್ ಹಾಕಿದ್ದರೂ ಅದನ್ನೂ "ಲೈಕ್" ಮಾಡಿದ್ದೀಯಲ್ಲ..ನಿನಗೆ ಮನಸಾದರೂ ಹೇಗೆ ಬಂತು?

ಆಗ ಮಧುಗೆ ಜ್ಞಾನೋದಯವಾಯಿತು. ಅವನು ಮಧು ಏನು ಪೋಸ್ಟ್ ಮಾಡಿದರೂ ಅದನ್ನು ಹಿಂದೂ ಮುಂದು ನೋಡದೆ ಲೈಕ್ ಮಾಡುತ್ತಿದ್ದ. ಈಗಲೂ ಅದೇ ತಪ್ಪು ಮಾಡಿದ್ದ. ನಂತರ ಅವಳಿಗೆ ತನ್ನ ತಪ್ಪಿನ ಅರಿವನ್ನುತಿಳಿಸಿ ಇನ್ನು  ಮುಂದೆ ಯಾವುದೇ ಆಗಲಿ, ಯಾರದೇ ಆಗಲಿ ಪೋಸ್ಟನ್ನು ಓದದೆ ಅಪ್ಪಿತಪ್ಪಿ ಲೈಕ್ ಮಾಡುವುದಿಲ್ಲ ಎಂದು ತಿಳಿಸಿದ ಮೇಲೆಪೂರ್ವಿ ಸಮಾಧಾನವಾದಳು.