ಗೆಳೆಯಾ...
ಈ ಮಾಗಿಯ ಚಳಿಯಲ್ಲಿ 
ಮೈಯಾಯಿತೇಕೆ ಪುಲಕ!
ತೆರೆಯಿತೇಕೆ  ಸವಿ ಕನಸಿಗೆ 
ಎದೆ ಬಾಗಿಲ ಚಿಲಕ!
 
ತಿಳಿಯದಾಯಿತೇಕೆ ಮೊದಲೆ 
ನೀ ಸುಳಿಯುವ  ಜಾಡು!
ಉಲಿಯುತ್ತಿದ್ದೆ  ಇಂದೇ ನಾನು... 
ನೀನಾಡುವ ಮಾತಲ್ಲಿ ನೇಯ್ದ
ಒಂದು ಒಲವಿನ ಹಾಡು!
-ಮಾಲು