ಬೆಳದಿಂಗಳ ರಾತ್ರಿಯಲ್ಲಿ
ಬೆರಗಾಯಿತು ಕಣ್ಣು
ತಿಳಿ ನೀರಿಗೂ ಮೈ ಹೊಳಪಿದೆ
ಹೊನ್ನಾಗಿದೆ ಮಣ್ಣು !
ಹರಯದ ಹೊಸ ಆಸೆಯ
ಬಿಸಿ ಮಾಡುವ ಸಮಯ
ಇರಬಾರದೇ ಇಲ್ಲಿ ನೀನು
ನಿಜ ಮಾಡಲು ಭ್ರಮೆಯ!
ಸವಿಯಬೇಕು ಮತ್ತೆ ನಾನು
ಮನದಿ ಮೆದ್ದ ಬೆಲ್ಲ
ನಿನ್ನ ಸಿಹಿ ಮುತ್ತಿಗೆ, ಗೆಳೆಯ
ಕಾದಿದೆ ತುಟಿ, ಗಲ್ಲ!
-ಮಾಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!