ನಗುವ ನಯನಗಳಿಗದ್ಯಾವ ನ೦ಜು ನಾಟಿತೊ?
ನಸುಕಾಡದೆ ನಿಲಿ೯ಪ್ತ ಭಾವ ತಾಳಿತೊ?
ನಳನಳಿಸುತ್ತಿತ್ತೊ ನೂರಾರು ನಿರೀಕ್ಷೆಯಲಿ,
ನನಸಾಗುವುದೆಂದು ನೆನೆಯುವುದರೊಳು ನುಚ್ಚು ನೂರಾಯಿತೊ?
ನೋಟದ ನಶೆ ಅದೆಲ್ಲಿ ನುಸುಳಿಹೋಯಿತೊ?
ನೆಚ್ಚಿದರೂ ನೆಚ್ಚದಂತ್ಯಾಕೆ ನಟಿಸಿ ನಿಂದಿತೊ?
ನೋಟದೊಳಗದ್ಯಾವ ನೈಜವ ನುಡಿಯಬಯಸಿತೊ?