"ವ್ಹಾ ಕಿಂಗ್" ಅಂತಾರೆ ನನ್ನ! ಕ್ವೀನ್ ಜತೆ ಸಂಜೆ "ವಾಕಿಂಗ್" ಹೋಗುವಾಗ. ಸ್ಟೈಲಾಗಿ ಎದೆಯುಬ್ಬಿಸಿ ನಡೆಯುತ್ತಾ, ಪ್ಯಾಂಟಿನ ಹಿಂದಿನ ಕಿಸೆಯಲ್ಲಿ ಕ್ರೆಡಿಟ್ ಕಾರ್ಡ್ ಇದೆಯಾ ಎಂದು ಮೆಲ್ಲ ಮುಟ್ಟಿ ಕನ್‌ಫರ್ಮ್ ಮಾಡಿಕೊಂಡು, ಅಲ್ಲೇ ಇರುವ ಬಾಚಣಿಗೆ ತೆಗೆದು ಗಾಳಿಗೆ ಹಾರಾಡುವ ನಾಲ್ಕು ತಲೆಕೂದಲು ಬಾಚಿ ಪುನಃ ಕಿಸೆಯಲ್ಲಿ ಇಟ್ಟುಕೊಳ್ಳುವೆ.

ವಾಕಿಂಗ್ ಮುಗಿಸಿ ಹಿಂದೆ ಬರುವಾಗ...೨-೩ ತುಂಬಿದ ಚೀಲಗಳನ್ನು ಹೆಗಲಿಗೇರಿಸಿ "ವಾ ಸರ್ವೆಂಟ್" ಆಗಿರುವೆ :( ಎಲ್ಲರಂತೆ ಸಂಜೆ ತಡವಾಗಿ ಮನೆಗೆ ಬಂದು, "ಆಫೀಸಲ್ಲಿ ವಿಪರೀತ ಕೆಲಸ.." ಅನ್ನಬಹುದು. ಆದರೆ ಸಂಜೆಯ ಕಾಫಿ+ಸ್ಪೆಶಲ್ ತಿನಿಸುಗಳು ತಪ್ಪುತ್ತದೆ. ಅದಕ್ಕಾಗಿ ಕಾಫಿ- ತಿಂಡಿ ಮುಗಿಸಿ ಹೆಚ್ಚಾಗಿ "ಕಾರಲ್ಲೇ" ವಾಕಿಂಗ್ ಹೋಗುವೆ. ಕಾರಲ್ಲೇ ಹೋದರೆ ಉಳಿತಾಯ ಜಾಸ್ತಿ. "ಅಲ್ಲಿ ಪಾರ್ಕಿಂಗ್ ಸ್ಥಳವಿಲ್ಲ...ಇಲ್ಲಿ ನೋ ಎಂಟ್ರಿ" ಎಂದೆಲ್ಲಾ ಹೇಳಿ ತಪ್ಪಿಸಬಹುದು.

ವಾಕಿಂಗ್ ಹೋಗದೇ ಇದ್ದರೆ...? ಪಕ್ಕದ ಮನೆಯಮ್ಮನವರೊಂದಿಗೆ ಮಾತನಾಡುತ್ತಾ, "ಬಂದೇ ರೀ...ಬಂದೇ.." ಅನ್ನುತ್ತಾ, ಸಂಜೆ ಕಳೆದು ರಾತ್ರಿ ಆದರೂ.. ಕಾಫಿ ಬಿಡಿ, ಮುಖದರ್ಶನವೂ ಆಗುವುದಿಲ್ಲ.

ಹೀಗೇ ಕಳೆದ ಸಂಜೆ ಎರಡು ಚೀಲ ಹೆಗಲಿಗೇರಿಸಿ, ನನ್ನ ಕ್ವೀನ್ ಹಿಂದೆ "ಚಲ್ತೇ..ಚಲ್ತೇ.." ಇದ್ದೆ. ಆಶ್ಚರ್ಯ! ರಸ್ತೆಬದಿಯಲ್ಲಿ ಚಗ್ತೆ ಸೊಪ್ಪಿನ ಗಿಡಗಳು ಇದ್ದವು! "ಸ್ವಲ್ಪ ಈ ಚೀಲ ಹಿಡಕೊಳ್ಳೆ. ನಮ್ಮ ಸಂಪದದ ಶೋಭಾ ಅವರುತಂಬುಳಿ ಮಾಡಲು ಹೇಳಿದ ಗಿಡ ಅಲ್ಲವೇ ಇದು..ಸ್ವಲ್ಪ ಸೊಪ್ಪು ತೆಗೆದುಕೊಳ್ಳುವೆ" ಎಂದೆ.

"ಥತ್..ನಿಮ್ಮ..ಮೋರಿಬದಿಯ ಗಿಡ..ಛೀsss" ಅಂದಳು.

"ಅಂಗಡಿಯಲ್ಲಿ, ಗಾಡಿಯಲ್ಲಿ ಪರ್ಚೇಸ್ ಮಾಡಿದ್ದು ಮೋರಿಬದಿಯಲ್ಲಿ ಬೆಳೆದದ್ದಲ್ಲ ಎಂಬುದಕ್ಕೆ ಏನು ಗ್ಯಾರಂಟಿ?" ಅಂದೆ. ವಾದ ಸಂಪದದಲ್ಲಿ ಮಾಡಬಹುದು,ಹೆಂಡತಿ ಬಳಿಯಲ್ಲ ಎಂದು ಗೊತ್ತಿದ್ದೂ ತಪ್ಪು ಮಾಡಿದೆ. "........" (ಎಡಿಟ್ ಮಾಡಲಾಗಿದೆ)

"ಹೋಗಲಿ ಬಿಡೆ. ಒಂದೆರಡು ಫೋಟೋ ಆದರೂ ತೆಗೆಯುತ್ತೇನೆ." ಅಂದೆ. ಕೋಪದಲ್ಲೂ ಸ್ಟೈಲಾಗಿ ಪೋಸ್ ಕೊಟ್ಟು ನಿಂತಳು. ಸುಮ್ಮನೆ ಒಂದೆರಡು ಕ್ಲಿಕ್ ಮಾಡಬಹುದಿತ್ತು. ಅದು ಬಿಟ್ಟು......"ನಿನ್ನದಲ್ವೇ.. ಗಿಡದ್ದು.." ಅಂದೆ. "............"(ಎಡಿಟೆಡ್).

ಬೇಗ ಬೇಗನೆ ಗಿಡದ ಕೆಲ ಫೋಟೋ ತೆಗೆದು, ಒಂದೆರಡು ಗಿಡವನ್ನು ಕಿತ್ತುಕೊಂಡು, ಹಿಂದೆ ಓಡಿಹೋಗಿ, ರಸ್ತೆಯ ಜನಗಳ ಬಗ್ಗೆ ಚಿಂತಿಸದೇ, "ಸ್ಸಾರಿ..ಕಣೇ.."ಅಂತ ಬಹಳ ರಮಿಸಿದರೂ, ಯಡ್ಡಿ ತರಹ ಮುಖ ಸಿಂಡರಿಸಿಕೊಂಡೇ ಹೋಗುತ್ತಿದ್ದಳು.

ಮನೆಗೆ ಹೋಗಿ ಸಾಮಾನೆಲ್ಲಾ ಇಳಿಸಿ, " ಈ ಚಗ್ತೆ ಸೊಪ್ಪಿನ ಎಲೆಯನ್ನು ಕೈ ಮುಷ್ಠಿಯ ಮೇಲೆ ಇಟ್ಟು ಇನ್ನೊಂದು ಕೈಯಿಂದ ಹೊಡೆದಾಗ ಟಪ್ ಅಂತ ಸೌಂಡ್ ಆಗುತ್ತದೆ" ಎಂದು ಹೇಳಿ ಮಾಡಿ ತೋರಿಸಿದೆ. "ಟಪ್ ಟಪ್" ಅಂತ ಎರಡು ಶಬ್ದವಾಯಿತು! "ಈ ಕಸವನ್ನೆಲ್ಲಾ ಇಲ್ಲಿಗೂ ತಂದ್ರಾ..ಹೊರಗೆ ತೊಟ್ಟಿಗೆ ಬೇಗ ಎಸೆದು ಬನ್ನಿ" ಎಂದು ಆಜ್ಞಾಪಿಸಿದಳು. ನೋವಾಗಿದ್ದ ಬೆನ್ನನ್ನು ಉಜ್ಜುತ್ತಾ "ಕಸನಾ..ಇದು! ಔಷಧೀ ಗಿಡ ಕಣೇ ಇದು. ತುಳುವಿನಲ್ಲಿ ಸಜಂಕ್, ಸಂಸ್ಕೃತದಲ್ಲಿ ___LINK_OPEN_href="http://ayurvedicmedicinalplants.com/index.php?option=com_zoom&Itemid=26&page=view&catid=32&key=0%3E%E0%B2%9A%E0%B2%95%E0%B3%8D%E0%B2%B0%E0%B2%AE%E0%B2%B0%E0%B3%8D%E0%B2%A6%3C/a"___ಚಕ್ರಮರ್ದ, ಲ್ಯಾಟಿನ್‌ನಲ್ಲಿ  (   ___LINK_OPEN_href="http://www.oswaldasia.org/species/c/casto/casto_en.html"___http://www.oswaldasia.org/species/c/casto/casto_en.html )Cassia tora ಎನ್ನುತ್ತಾರೆ. ರಿಂಗ್ ವರ್ಮ್‌ಗೆ ಇದು ರಾಮಬಾಣ...." ಕಣ್ಣು ಗರಗರ ತಿರುಗುವುದನ್ನು ನೋಡಿ, ಇನ್ನು ಇದ್ದರೆ ಅಪಾಯ ಎಂದು ಚಗ್ತೆಸೊಪ್ಪನ್ನೆಲಾ ಹಿಡಕೊಂಡು ಹೊರಗೆ ಬಂದೆ.

ಚಿತ್ರ ಕೃಪೆ: ___LINK_OPEN_href="http://ayurvedicmedicinalplants.com/index.php?option=com_zoom&Itemid=26&page=view&catid=32&key=0%3E%E0%B2%9A%E0%B2%95%E0%B3%8D%E0%B2%B0%E0%B2%AE%E0%B2%B0%E0%B3%8D%E0%B2%A6%3C/a"___http://ayurvedicmedicinalplants.com/index.php?option=com_zoom&Itemid=26&page=view&catid=32&key=0%3E%E0%B2%9A%E0%B2%95%E0%B3%8D%E0%B2%B0%E0%B2%AE%E0%B2%B0%E0%B3%8D%E0%B2%A6%3C/a