-ಸಮರ್ಪಣೆ
 
ನೋಡು ನೋಡುತಲಿರುವೆ 
ಹರಿ ನಿನ್ನ ಸುರವದನ 
ನೀ ನನಗೆ ಕೊಟ್ಟ ಕಣ್ ದಣಿವ ತನಕ...
 
ಕೇಳು ಕೇಳುತಲಿರುವೆ 
ಹರಿ ನಿನ್ನ ಸುರ  ಗಾನ 
ನೀ ನನಗೆ ಕೊಟ್ಟ ಮನ ತಣಿವ ತನಕ...
 
ಆಡು ಆಡಲಿ ನಿನ್ನ 
ನೀಳ  ಬೆರಳಿನ ಲೀಲೆ ಕೊಳಲ ಮೇಲೆ
ದೇವ ಲೋಕದ ಗಾನ ಸುಳಿದು  ತೇಲೆ...
 
ಕಾದು ಕಾಯುತಲಿರುವೆ 
ನಿನ್ನವಳು ನಾ ಹರಿಯೆ 
ನನ್ನನಾಗಿಸು ನಿನ್ನ ಕೊರಳ ಮಾಲೆ...
-ಮಾಲು