ಪಿ ಯು ಸಿ ನಂತರ ಇಂಜಿನಿಯರಿಂಗ್ ಇತ್ಯಾದಿ ಕೋರ್ಸ್‌ಗೆ ಸೇರಲು ಸಿ ಇ ಟಿ ಪರೀಕ್ಷೆ ಇದ್ದ ಹಾಗೇ, MBBS ನಂತರ PGಗೆ ಸೇರಲು ಆಲ್ ಇಂಡಿಯಾ ಲೆವೆಲ್‌ನಲ್ಲಿ NEET exam ಈ ಬಾರಿ ಹೊಸದಾಗಿ ಪ್ರಾರಂಭಿಸಿದ್ದಾರೆ. ಆದರೆ ಪ್ರೈವೇಟ್ ಕಾಲೇಜಿನವರು ಕೋರ್ಟ್ ಮೆಟ್ಟಲು ಹತ್ತಿ ತಡೆಯಾಜ್ಞೆ ತಂದರು. ಇನ್ನೂ ಇತ್ಯರ್ಥವಾಗದಿರುವುದರಿಂದ ಕರ್ನಾಟಕ PG CET ಪರೀಕ್ಷೆ ಬೆಂಗಳೂರಲ್ಲಿ ಕಳೆದ ರವಿವಾರ ನಡೆಯಿತು. ಸಂಡೆ ನನಗೂ ರಜೆ ಇದ್ದುದರಿಂದ ಜಯನಗರ ೪ನೇ ಟಿ ಬ್ಲಾಕ್‌ನಲ್ಲಿರುವ ಕಾಲೇಜ್‌ಗೆ ಮಗಳನ್ನೂ, ಅವಳ ಗೆಳತಿಯನ್ನು ಸಮೀಪದ ಇನ್ನೊಂದು ಕಾಲೇಜ್‌ನಲ್ಲಿ ಪರೀಕ್ಷೆ ಬರೆಯಲು ಬಿಟ್ಟು ಇನ್ನು ೪ ಗಂಟೆ ಹೇಗೆ ಟೈಮ್ ಪಾಸ್ ಮಾಡುವುದು ಎಂದು ಯೋಚಿಸುತ್ತಿದ್ದೆ. ಲಾಲ್ ಬಾಗ್, ರಾಗಿಗುಡ್ಡ ಎಲ್ಲಾ ಸುತ್ತಿದ್ದರು ಜಯನಗರದ ಪರಿಚಯ ಅಷ್ಟು ಇರಲಿಲ್ಲ. ಮೊದಲಿಗೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಹೋದೆ. ಚೆನ್ನಾಗಿಯೇ ಇದೆ. ಅದನ್ನೇ ಒಡೆದು ಹೊಸದಾಗಿ ಕಟ್ಟಲು ಸರ್ಕಾರ ಹೊರಟಿತ್ತು.

ಅಲ್ಲಿಂದ ನಂತರ ಜಯನಗರ ೪ನೇ ಬ್ಲಾಕ್ ಬಸ್ ಸ್ಟಾಂಡ್ ‌ಗೆ ಹೋಗಿ ಅಲ್ಲಿ ಮಹಡಿಯಲ್ಲಿರುವ ಮಾಲ್‌ಗೆ ನುಗ್ಗಿದೆ. ಟೈಮ್ ಪಾಸ್ ಮಾಡಲು ಸುತ್ತುತ್ತಿರುವಾಗ ಈ "ಧಾರೆಪುಳಿ" ( http://en.wikipedia.org/wiki/Carambola ) ಕಾಣಸಿಕ್ಕಿತು. ಊರಲ್ಲಿ ಅದು ಮರದ ಬುಡದಲ್ಲಿ ಬಿದ್ದಿದ್ದರೂ ಮೂಸುವವರು ಇರಲಿಲ್ಲ-ಇಲ್ಲಿ ಅದಕ್ಕೆ ಸಿಂಗಾರವೇನು...೬೫ರೂ!!

ಮಾಲ್ನಿಂದ ಹೊರಬಂದಾಗ ಇನ್ನೂ ಒಂದು ಗಂಟೆ ಸಮಯ ಬಾಕಿ ಇತ್ತು. ಎದುರು ನೋಡಿದಾಗ ದೇವಸ್ಥಾನ ಕಾಣಿಸಿತು. ಸುಂದರ ದೇವಸ್ಥಾನ. ಜೈನ ತೀರ್ಥಂಕರರಲ್ಲಿ ಒಬ್ಬರಾದ ಧರ್ಮನಾಥರ ದೇಗುಲ. ಅಲ್ಲಿ ಲಕ್ಷ್ಮಿ, ಸರಸ್ವತಿ, ವರಾಹ ಮುಖದ ದೇವತೆ...ಹೀಗೆ ಅನೇಕ ದೇವತೆಗಳ ವಿಗ್ರಹಗಳಿದ್ದವು. ಎಲ್ಲೂ ಪೂಜೆ ಮಾಡುವವರು,ತೀರ್ಥ ಪ್ರಸಾದ ಕೊಡುವವರು ಇರಲಿಲ್ಲ. ಗರ್ಭಗುಡಿಯವರೆಗೂ ಹೋಗಿ ತೀರ್ಥಂಕರರ ಹಾಗೂ ಇತರ ವಿಗ್ರಹವನ್ನು ನಿರ್ಭಯವಾಗಿ ಮುಟ್ಟಿ ಪೂಜಿಸಿ ಬರಬಹುದು.

ದೇವಸ್ಥಾನದ ಮೇಲೆ ಹತ್ತಲು ಮೆಟ್ಟಲುಗಳಿವೆ. ಬಾಯಿಗೆ ಬಟ್ಟೆ ಕಟ್ಟಿ ಓಡಾಡುತ್ತಿದ್ದ ಜೈನ ಸನ್ಯಾಸಿಗಳಲ್ಲಿ ಮೇಲೆ ಹತ್ತಿ ನೋಡಬಹುದೋ ಎಂದು ವಿಚಾರಿಸಿದೆ. ಕಣ್ಣಲ್ಲೇ ಸಮ್ಮತಿಸಿದರು.

   

ಪರೀಕ್ಷೆ ಮುಗಿಯುವ ಸಮಯವಾದುದರಿಂದ ಇನ್ನೂ ಮೇಲೆ ಹತ್ತಲು ಹೋಗದೇ ಹಿಂದೆ ಬಂದೆನು.

-ಗಣೇಶ.

ಶ್ರೀ ಅವರು  ನನ್ನ ಮುದ್ದಿನ ಗಿಣಿಯ ಬಗ್ಗೆ ವಿಚಾರಿಸಿದ್ದರು. ಅದಕ್ಕಾಗಿ ಗಿಣಿಯ ಲೇಟೆಸ್ಟ್ ಪೋಸ್-