ಅಳಲು...
ಏನ ಹೇಳಲಿ...ಗೆಳತಿ ಹೇಗೆ ಹೇಳಲಿ
ಮನವನಿಟ್ಟನಿವನು ಮತ್ತೊಂದ ಹೆಣ್ಣಲಿ...
ಕೊಟ್ಟ ಹಣ್ಣ ಸುಲಿದು ತಿಂದು
ನಲಿದು ನನ್ನಲಿ...
ಭಲ್ಲೆ ನೆಟ್ಟನಲ್ಲ ನಲ್ಲ
ನನ್ನ ಎದೆಯಲಿ...
ಕಡೆಗೆ ದೂಡಿ ಹೋದ ನನ್ನ
ಇಲ್ಲೇ ಬದಿಯಲಿ...
ಏನ ಹೇಳಲಿ...ಗೆಳತಿ ಹೇಗೆ ಹೇಳಲಿ
ಮನವನಿಟ್ಟನಲ್ಲೆ ಮತ್ತೊಂದ ಹೆಣ್ಣಲಿ...
-ಮಾಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!