ನಿಶ್ಚಿಂತನಾಗಬೇಕಂತಿ ಬಹು ದುಶ್ಚಿಂತೆಯೊಳಗೆ ನೀ ಕುಂತಿ
ಯಾಕೋ ಎಲೋ ನಿನಗೀ ಭ್ರಾಂತಿ?
ನಾಳಿಗಾಗುವುದೀಗಂತಿ
ಆಶಾಪಾಶಗಳ ಬ್ಯಾಡಂತಿ ಒಳ್ಳೆ ಮೀಸಲ ನುಡಿ ಮಾತಾಡಂತಿ
ಭಾಷೆ ಕೊಟ್ಟು ತಪ್ಪ ಬ್ಯಾಡಂತಿ ಹರಿದಾಸರೊಳಗೆ ಮನ ನೀಡಂತಿ

ಅವರನು ಕಂಡರೆ ಅವರಂತೆ ಮತ್ತಿವರನು ಕಂಡರೆ ಇವರಂತೆ
ಅವರಿವರರಿಯದೆ ತನಗೂ ತಿಳಿಯದೆ ಮೂಢನಾಗೇ ಸುಮ್ಮನೆ ಕುಂತಿ

ಪೊಡವಿಯೊಳಗೆ ಶಿಶುನಾಳಂತಿ
ಧೃಡ ಗೋವಿಂದ ಯೋಗಿಯಾ ಚಿಂತಿ
ಬಿಡದಾತನ ಸೇವೇ ಮಾಡಂತಿ
ನೀ ಭಯವಿಲ್ಲದೆ ಗುರುವಿನ ಕೂಡಂತಿ