ಮಂದ ನೀಲ ಬಾನಿನಲ್ಲಿ
ಅಂದವಾದ ಬೆಳ್ಳಿ ಕಾಸು;
ಕಣ್ಣು ಹೊಡೆದು ಕೆಣಕುತಿರುವ
ಬಣ್ಣ ತಳೆದ ಚಿಕ್ಕೆ ಹಾಸು;
ಯಾರೋ ಹಚ್ಚಿಟ್ಟ ಧೂಪದಿಂದ
ಬರುವ ಘಮ್ಮೆನ್ನುವ ಧೂಮ;
ಸುತ್ತ ಸುಳಿಯುತಿರುವರಿಲ್ಲೇ
ರತಿ ಮತ್ತು ಕಾಮ;
ಜೊನ್ನ ಜೇನಿನಲ್ಲಿ ಹೊನ್ನಾಗಿದೆ ಧಾತ್ರಿ;
ಪ್ರಿಯ, ನೀ ನನ್ನೊಡನಿರಬೇಕಿತ್ತು
ಈ ರಾತ್ರಿ..!
-ಮಾಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!