ಹುಟ್ಟು ಸಾವು.. ನೋವು ನಲಿವು
ಬೇವು ಬೆಲ್ಲ.. ಮಾವು ಬೇವು
ಒಮ್ಮೆ ಸೋಲು,ಒಮ್ಮೆ ಗೆಲುವು
ಏಣಿ ಏರೆ, ಕಡಿವ ಹಾವು..
ಮಳೆಯ ಚಳಿ, ಬಿಸಿಲ ಕಾವು
ಹುಚ್ಚು ಮನಕೆ ಚಿಂತೆ ಮೇವು..
ಅವರು ಇವರು ನಾವು ನೀವು
ಕೂಡೊ ಮೊದಲೆ ಕಳೆವ ಠೇವು.. 
 
ಮೇಲಿತ್ತಿ ಮತ್ತೆ ಕೆಡಗುವ ಕುಹಕಿ 
ಮಂದಿಯದು ತಂಡೋಪತಂಡ...
ಸುತ್ತಿಸಿ ಮತ್ತಲ್ಲೇ ತರುವ 
ಜೀವನದ ಮಂಡಲಾಕಾರ ಅಖಂಡ...
ಇರುವುದ ಬಿಟ್ಟು ಇರದುದಕೆ ಜೊಲ್ಲು
ಸುರಿಸಿದರೆ ಬಾಳು ದಂಡಪಿಂಡ...!!
ನರಿಯ ಹುಳಿ ದ್ರಾಕ್ಷಿ ಮರೆ ಸಾಕು
ಅಂದೆಂದೋ ಕಂಡ ಮೀನಖಂಡ...!!