ಕೋಕಂ ಕುಡಿಯಿರಿ, ಕೋಲಾ ಬಿಡಿ ಅಂತ ಕಳೆದ ಬೇಸಿಗೆಯಲ್ಲಿ ಹೇಳಿದ್ದೆ. ಕೆಲವರಾದರೂ ಪ್ರಾರಂಭಿಸಿರಬಹುದು ಅಂದುಕೊಳ್ಳುತ್ತೇನೆ. ಆ ಲೇಖನ ಬರೆದಾಗ ನನ್ನ ಬಳಿ ೫ನೇ ಕಣ್ಣು (ಶ್ರೀಧರ್ಜಿ ಹೇಳಿದ ಕ್ಯಾಮರಾ ಕಣ್ಣು) ಇಲ್ಲದಿದ್ದುದರಿಂದ ಫೋಟೋಗಳನ್ನು ಹಾಕಿರಲಿಲ್ಲ.
ಈ ಬೇಸಿಗೆ ರಜೆಯಲ್ಲಿ ಘಟ್ಟ ಅಥವಾ ಘಟ್ಟದ ಕೆಳಗೆ, ನೆಂಟರ ಮನೆಗೆ ಹೋಗಿದ್ದೀರಿ ಅಂದ್ರೆ ಅಲ್ಲಿ ಬಿಸಿಲಿಗೆ ಒಣ ಹಾಕಿದ ಕೋಕಂ ( http://www.timeswellness.com/article/7/20101211201012101607102743646e4b9 )ಸಿಪ್ಪೆಗಳು ಕಾಣಿಸಬಹುದು. ಕಂಡರೆ ಬಿಡಬೇಡಿ. ಒಂದು ಚೀಲ ತುಂಬಾ ತುಂಬಿ ಹಿಂದಕ್ಕೆ ಬರುವಾಗ ತೆಗೆದುಕೊಂಡು ಬನ್ನಿ.
ಊರಿಂದ ಹಿಂದೆ ಬಂದಾಯ್ತಾ?
ಸಿಕ್ಕಾಪಟ್ಟೆ ಸೆಖೆಯಾಗುತ್ತಿದೆಯಲ್ಲಾ? ಚೀಲ ಬಿಚ್ಚಿ.. ಆ ಒಣ ಸಿಪ್ಪೆ(ಕೋಕಂ)ಯಿಂದ ಜ್ಯೂಸ್ ಮಾಡುವುದು ಹೇಳುವೆ. ಪಾತ್ರೆಯಲ್ಲಿ ಸ್ವಲ್ಪ ಒಣ ಸಿಪ್ಪೆಗಳನ್ನು ಹಾಕಿ, ನೀರು ಹಾಕಿಡಿ. ಸ್ವಲ್ಪ ಸಮಯದ ನಂತರ ಸಿಪ್ಪೆ ತೆಗೆದು, ಕೆಂಪು ಕೆಂಪಾದ ನೀರಿಗೆ ಸಕ್ಕರೆ, ಬೇಕಿದ್ದರೆ ಐಸ್ ಬೆರೆಸಿ, ಕುಡಿಯಿರಿ. ಬಾಯಿಂದ ಹೊಟ್ಟೆ ತಳದವರೆಗೆ ತಂಪಾದ ಅನುಭವವಾಗುವುದು. ಆಹಾ..ಅನ್ನದಿದ್ದರೆ ಹೇಳಿ!
ಊರಿಂದ ಬಂದು ಸುಸ್ತಾಗಿದ್ದೀರಿ. ಸಾರು ಮಾಡಲು ಟೊಮೆಟೋ ಸಹ ಇಲ್ಲ. ಚಿಂತಿಸಬೇಡಿ. ೮-೧೦ ಕೋಕಂ ಸಿಪ್ಪೆಗೆ ನೀರು ಬೆರೆಸಿ ಕುದಿಸಿ, ಸ್ವಲ್ಪ ಕರಿಮೆಣಸು ಪುಡಿ, ಬೆಲ್ಲ ಸ್ವಲ್ಪ, ಬೇಕಿದ್ದರೆ ಈರುಳ್ಳಿ ಕತ್ತರಿಸಿ ಸೇರಿಸಿ, ಬೆಳ್ಳುಳ್ಳಿ ಒಗ್ಗರಣೆ, ರುಚಿಗೆ ತಕ್ಕ ಉಪ್ಪು ಹಾಕಿ ಇಳಿಸಿ...ಕೆಂಪು ಕೆಂಪು ಸಾರು ರೆಡಿ. ವಾಹ್ ಕೋಕಂ ವಾಹ್ ಅನ್ನುತ್ತಾ ಊಟ ಮಾಡಿ ಪಾತ್ರೆ ಖಾಲಿ ಆಗದಿದ್ದರೆ ಹೇಳಿ.
ಕೋಕಂ ತಂಬುಳಿಯೂ ಮಾಡಬಹುದಂತೆ! http://wwwchitranna.blogspot.in/2010/09/kokum-tabuli.html
ಕೋಕಂನಿಂದ ತೂಕ ಕಮ್ಮಿಯಾಗುವುದು. http://myonlineherbs.wordpress.com/2013/01/23/vrikshamla-a-better-natural-cure-for-weight-loss-issue/ನನ್ನದೂ ಐದು ಕೆ.ಜಿ ತೂಕ ಕಮ್ಮಿಯಾಗಿದೆ! ಆದರೆ ಐಸ್ ಕ್ರೀಂ, ಸ್ವೀಟ್ಸ್, ಎಣ್ಣೆ ಪದಾರ್ಥಗಳಿಂದಾಗಿ ೧೦ ಕೆ.ಜಿ. ಏರಿ, ಈ ಐದು ಕೆ.ಜಿ ಇಳಿದದ್ದು ಗಮನಕ್ಕೇ ಬಂದಿಲ್ಲಾ..........:(
ಪ್ರತಿಕ್ರಿಯೆ (7)