....ಗೆ 
ಚೆಲುವು ನಲಿಯುವ ನಿನ್ನ ಮೊಗದಲಿ  ಮುಂಗುರುಳು ತೂಗಿದೆ ಗಾಳಿಗೆ
ಚೆಂದ ತೋರುವ ಮಂದ ಹಾಸವು 
ಪಲ್ಲವಿಯು ಒಲವಿನ ಹಾಡಿಗೆ 
ದೀಪದಂತಿಹ ನಿನ್ನ ಕಂಗಳು 
ಬೆಳಕು ನನ್ನೀ ಬಾಳಿಗೆ 
ನೀ ಬರುವ ಕನಸನು ಕಾಣುವೆ 
ನನಸಾಗಿ ಬರುವೆಯ ನಾಳೆಗೆ! 
-ಮಾಲು