ಮೊನ್ನೆ ಸರ್ಕಾರಿ ಕಛೇರಿಯಲ್ಲಿ "ಸರ್ಕಾರದ ಕೆಲಸ ದೇವರ ಕೆಲಸ" ಎಂಬ ಫಲಕ ನೋಡಿದಾಗೆಯೇ ನಸುನಗು ಶುರುವಾಯಿತು. ಆ ದೊಡ್ಡ ಸರತಿಸಾಲಿನಲ್ಲಿ ಪುಣ್ಯಕ್ಕೆ ನನ್ನ ನಗುವನ್ನು ಯಾರು ಗಮನಿಸಲ್ಲಿಲ್ಲ.ನಗುವಿಗೆ ಕಾರಣ ನೆನಪಾದ ಗಾದೆ "ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ". ಇಲ್ಲಿ ಪೂಜಾರಿಗೆ ದಕ್ಷಿಣೆ ಕೊಟ್ಟ ಮೇಲೆ ದೇವರ ದರ್ಶನ ಆಗೋ ಹಾಗೆ, ಸರ್ಕಾರಿ ನೌಕರರಿಗೆ ದಕ್ಷಿಣೆ ಕೊಟ್ಟ ಮೇಲೆನೇ ಸರ್ಕಾರದ ಕೆಲಸ ಆಗೋದು.
ಆದರೆ ಸರಿಯಾದ ಹೇಳಿಕೆ ಹೀಗಿದೆ - ಸೇವಕನಿರುವುದು ಜನರಿಗೆ ಕೊಡುವುದಕ್ಕೆ, ಅವರಿಂದ ತೆಗೆದುಕೊಳ್ಳುವುದಕ್ಕಲ್ಲ. ಯಾವ ಭೇದವೂ ನಿಷ್ಠೆಯಿಂದ ದುಡಿಯುವುದಷ್ಟೇ ಸೇವಕನ ಕೆಲಸ. ಹಾಗೆ ಅರ್ಹರಿಗೆ ನೊಂದವರಿಗೆ ಸೇವೆ ಮಾಡಿದ್ದೆ ಆದರೆ ಸರ್ಕಾರಿ ನೌಕರನಾಗಿದ್ದಕ್ಕೂ, ಸೇವಕನಾಗಿದ್ದಕ್ಕೂ ಸಾರ್ಥಕತೆ ದೊರೆಯುತ್ತದೆ. ಇಲ್ಲಿ ಮುಖ್ಯವಾಗಿರಬೇಕಾದದ್ದು ನಿಸ್ವಾರ್ಥ ಸೇವೆ. ಗಾಂಧೀಜಿ, 'ನಿನ್ನನ್ನು ಅರಸಿ ಬಂದವನು ನಿನ್ನಲ್ಲಿಗೆ ಬಂದ ದೇವರು ಎಂದು ಪರಿಗಣಿಸಿ, ನಿನಗೆ ಮಾಡುತ್ತಿರುವ ಉಪಕಾರವೆಂದು ಬಗೆ' ಎನ್ನುತ್ತಾರೆ. ನಾವು ಕೊಡುವುದಕ್ಕಿಂತ ಮಿಗಿಲಾಗಿ, ಆತ ನಮ್ಮಿಂದ ಪಡೆಯಲು ಬಂದಿರುವುದು ದೇವಸದೃಷವೆಂದು ಭಾವಿಸಬೇಕು ಎಂದು ಸೇವಕನಾದವನು ಎಂದೂ ಮರೆಯಬಾರದು.
ಚಿತ್ರ ಕೃಪೆ : ಅಂತರ್ಜಾಲ
ಪ್ರತಿಕ್ರಿಯೆ (1)